ನವದೆಹಲಿ: ಬೆಳೆಯುವ ಪೈರು ಮೊಳಕೆಯಲ್ಲಿ ಎಂಬುದೊಂದು ಮಾತಿದೆ. ಪುತ್ತೂರು ಮೂಲದ ಒಂದೂವರೆ ವರ್ಷದ ಎಮಿನ್ ಶಹರಾನ್ ಎಂಬ ಪುಟ್ಟ ಬಾಲಕ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿ ಸೇರಿದ್ದಾನೆ.
ದಕ್ಷಿಣ ಕನ್ನಡದ ಎಮಿನ್ ಶಹ್ರಾನ್ 17 ದೇಹದ ಭಾಗಗಳು, 12 ಎಳೆಯ ಮತ್ತು 23 ಬೆಳೆದ ಪ್ರಾಣಿಗಳು, 10 ಆಕಾರಗಳು, 11 ಬಣ್ಣಗಳು, 15 ಗೃಹೋಪಯೋಗಿ ವಸ್ತುಗಳು, 19 ವಾಹನಗಳು, 17 ತರಕಾರಿಗಳು, 10 ಹಣ್ಣುಗಳು, ಎ ಯಿಂದ ಝಡ್ ವರೆಗಿನ ಅಕ್ಷರಗಳು, ಸಂಬಂಧಿತ ಪದಗಳನ್ನು ಪಠಿಸುವುದು, ಇಂಗ್ಲಿಷ್, ಹಿಂದಿ ಮತ್ತು ಅರೇಬಿಕ್ ಭಾಷೆಗಳಲ್ಲಿ 1 ರಿಂದ 10 ಎಣಿಸುವುದು, 1 ರಿಂದ 10 ಪ್ರಾಣಿಗಳನ್ನು ಅನುಕರಿಸುವುದು, 1 ರಿಂದ 10 ಪ್ರಾಣಿಗಳನ್ನು ಗುರುತಿಸಿದ್ದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಟ್ಟಿ ಸೇರಿದ್ದಾನೆ.
ಎಪ್ರಿಲ್ 20ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಿಡುಗಡೆ ಮಾಡಿದ ಸಾಧಕರ ಪಟ್ಟಿಯಲ್ಲಿ, ಎಮಿನ್ ಶಹರಾನ್ ಹೆಸರು ಪ್ರಕಟಗೊಂಡಿದೆ.