ಒಂದೇ ದಿನ ಆನ್‌ಲೈನ್‌ನಲ್ಲಿ 81 ಪ್ರಮಾಣಪತ್ರ !  ಕೇರಳದ ರೆಹನಾ ಶಾಜಹಾನ್ ವಿಶ್ವ ದಾಖಲೆ

Prasthutha|

ಕೇರಳ: ಕೋವಿಡ್‌  19ರ ಮೊದಲೆರಡು ಅಲೆಯ ಬಳಿಕ ಆನ್‌ಲೈನ್‌ ಕೋರ್ಸ್‌ಗಳಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈ ನಡುವೆ ಕೇರಳದ ವಿದ್ಯಾರ್ಥಿನಿ ರೆಹನಾ ಶಾಜಹಾನ್ , ವಿವಿಧ ಆನ್‌ಲೈನ್‌ ಕೋರ್ಸ್‌ಗಳ ಮೂಲಕ ಒಂದೇ ದಿನ ಬರೋಬ್ಬರಿ  81 ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

- Advertisement -

ಕೇರಳದ ಕೊಟ್ಟಾಯಂ ಜಿಲ್ಲೆಯ ಇಲ್ಲಿಕಲ್ ನಿವಾಸಿ ರೆಹನಾ ಶಾಜಹಾನ್ (25), ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರ ವಿಶ್ವವಿದ್ಯಾಲಯದಲ್ಲಿ ‘ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್’ (ಎಂಬಿಎ) ಪದವಿ ಪಡೆದಿದ್ದಾರೆ. ರೆಹನಾ ಬ್ಯಾಚ್‌ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಎಂಬಿಎಗೆ ಪ್ರವೇಶ ಪಡೆದ ಮಲಯಾಳಂನ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.  

ಇದುವರೆಗೂ ಒಂದೇ ದಿನದಲ್ಲಿ ಆನ್‌ಲೈನ್‌ನಲ್ಲಿ 75 ಪ್ರಮಾಣಪತ್ರಗಳನ್ನು ಪಡೆದದ್ದು ವಿಶ್ವದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ರೆಹನಾ ತಮ್ಮದಾಗಿಸಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ‘ಮಾಸ್ಟರ್ ಆಫ್ ಸೋಷಿಯಲ್ ವರ್ಕ್’ (ಎಂಎಸ್‌ಡಬ್ಲ್ಯೂ) ಮತ್ತು ‘ಡಿಪ್ಲೋಮಾ ಇನ್ ಗೈಡೆನ್ಸ್ ಅಂಡ್ ಕೌನ್ಸಲಿಂಗ್’ ಕೋರ್ಸ್‌ಗಳಿಗೆ ರೆಹನಾ ದಾಖಲಾಗಿದ್ದರು.  ಇದೇ ವೇಳೆ ನವದೆಹಲಿ ಮೂಲದ ‘ವುಮೆನ್ಸ್ ಮ್ಯಾನಿಫೆಸ್ಟೋ’ ಎಂಬ ಎನ್‌ಜಿಒ ಜೊತೆ ಸಹ ರೆಹನಾ ಕೆಲಸ ಮಾಡಿದ್ದಾರೆ. 

- Advertisement -

“ನನ್ನ ಸಾಧನೆಗೆ ಸಹೋದರಿ ನೆಹ್ಲಾ ಸ್ಪೂರ್ತಿಯಾಗಿದ್ದಾರೆ ಎಂದು ರೆಹನಾ ಪ್ರತಿಕ್ರಯಿಸಿದ್ದಾರೆ.  ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಿಂದ ‘ಮಾಸ್ಟರ್ಸ್‌ ಇನ್ ಒಪೆರಷನಲ್ ರಿಸರ್ಚ್’ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ನೆಹ್ಲಾ ಉನ್ನತ ಹುದ್ದೆಯಲ್ಲಿರುವುದಾಗಿ ರೆಹನಾ ಹೇಳಿದ್ದಾರೆ.



Join Whatsapp