ಭಾರತದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆ: ಜಿಂಬಾಬ್ವೆಯಿಂದ ಆಗಮಿಸಿದ ಗುಜರಾತ್ ನಿವಾಸಿಯಲ್ಲಿ ವೈರಸ್ ದೃಢ
Prasthutha: December 4, 2021

ನವದೆಹಲಿ: ಜಿಂಬಾಬ್ವೆಯಿಂದ ಹಿಂದಿರುಗಿದ ಗುಜರಾತ್ ಮೂಲದ ವ್ಯಕ್ತಿಯಲ್ಲಿ ರೂಪಾಂತರಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ.
ಮೂಲತಃ ಗುಜರಾತಿನ ಜಾಮ್ ನಗರದ ನಿವಾಸಿಯಾದ ವ್ಯಕ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ದಾಖಲಿಸಿದ ನಂತರ ಹೆಚ್ಚಿನ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಲ್ಯಾಬ್ ಕಳುಹಿಸಿದ ವೇಳೆ ಓಮಿಕ್ರಾನ್ ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಜೈ ಪ್ರಕಾಶ್ ಶಿವಹರೆ ದೃಢಪಡಿಸಿದ್ದಾರೆ.
ಭಾರತದಲ್ಲಿನ ಇತರ ಎರಡು ಪ್ರಕರಣಗಳ ಪೈಕಿ ಒಬ್ಬರು ಬೆಂಗಳೂರಿನ ಸಂಪೂರ್ಣ ಲಸಿಕೆ ಪಡೆದ ವೈದ್ಯರಾಗಿದ್ದು, ಅವರು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ. ಮತ್ತೊಬ್ಬರು ದಕ್ಷಿಣ ಆಫ್ರಿಕಾದ ಪ್ರಜೆ ಭಾರತಕ್ಕೆ ಬಂದವರಾಗಿದ್ದಾರೆ ಎಂದು ಹೇಳಲಾಗಿದೆ.
