ಭಾರತೀಯ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಹಿಂಸೆ : ಒಮಾನ್ ಗ್ರ್ಯಾಂಡ್ ಮುಫ್ತಿಯಿಂದ ಜಾಗತಿಕ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಕರೆ

Prasthutha|

ಮಸ್ಕತ್: ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯ ಹಿಂದುತ್ವವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸೆಗಳ ಬಗ್ಗೆ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿರುವ ಒಮಾನ್ ನ ಗ್ರ್ಯಾಂಡ್ ಮುಫ್ತಿ ಅಹ್ಮದ್ ಅಲ್ ಖಲೀಲಿ, ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಜಗತ್ತಿನ ಮುಸ್ಲಿಮ್ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದಾರೆ.

- Advertisement -


ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮುಫ್ತಿ, ಭಾರತದಲ್ಲಿ ಮುಸ್ಲಿಮ್ ನಾಗರಿಕ ವಿರುದ್ಧ ಸರ್ಕಾರದ ಬೆಂಬಲಿ ಉಗ್ರ ಗುಂಪುಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳು ಆಘಾತಕಾರಿಯಾಗಿವೆ ಮತ್ತು ಆತ್ಮಸಾಕ್ಷಿ ಇರುವ ಪ್ರತಿಯೊಬ್ಬರನ್ನೂ ತಲ್ಲಣಗೊಳಿಸುತ್ತವೆ. ಆದ್ದರಿಂದ, ಮಾನವೀಯತೆಯ ದೃಷ್ಟಿಯಿಂದ ಈ ಆಕ್ರಮಣವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ನಾನು ಶಾಂತಿ ಮತ್ತು ಪ್ರೀತಿಯನ್ನು ಬಯಸುವ ಎಲ್ಲಾ ದೇಶಗಳಿಗೆ ಮನವಿ ಮಾಡುತ್ತೇನೆ ಮತ್ತು ಈ ವಿಷಯದಲ್ಲಿ “ಇಸ್ಲಾಮಿಕ್ ಉಮ್ಮಾ” ಐಕ್ಯತೆ ಪ್ರದರ್ಶಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಮುಫ್ತಿ ಅಹ್ಮದ್ ಅಲ್ ಖಲೀಲಿ ಟ್ವೀಟ್ ಮೂಲಕ ಜಗತ್ತಿಗೆ ಮನವಿ ಮಾಡಿದ್ದಾರೆ.



Join Whatsapp