ಯೆಮನ್ ವಶದಲ್ಲಿದ್ದ ಭಾರತೀಯರ ಬಿಡುಗಡೆಗೆ ಒಮಾನ್ ನೆರವು

Prasthutha|

ಮಸ್ಕತ್ : ಯೆಮನ್ ವಶದಲ್ಲಿದ್ದ ಏಳು ಮಂದಿ ಭಾರತೀಯರ ಬಿಡುಗಡೆಗಾಗಿ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಮಧ್ಯಪ್ರವೇಶದ ಬಳಿಕ, ಒಮಾನ್ ಸರ್ಕಾರ ನೆರವು ನೀಡಿದೆ.

- Advertisement -

ಏಳು ಮಂದಿ ಭಾರತೀಯರು, ಬ್ರಿಟನ್ ನ ಮೂವರು, ಇಂಡೋನೇಷ್ಯಾ, ಫಿಲಿಪೀನ್ಸ್, ಮ್ಯಾನ್ಮಾರ್ ಮತ್ತು ಇಥಿಯೋಪಿಯಾದ ತಲಾ ಒಬ್ಬರಂತೆ ಒಟ್ಟು 14 ಮಂದಿಯನ್ನು ಯೆಮನ್ ನಲ್ಲಿ ಯಾವುದೇ ವಿಚಾರಣೆ ಇಲ್ಲದೇ ಬಂಧನದಲ್ಲಿರಿಸಿದ ಘಟನೆಯನ್ನು  ಮಾಧ್ಯಮಗಳು  ವರದಿ ಮಾಡಿತ್ತು.

ಏಳು ಮಂದಿ ಭಾರತೀಯರನ್ನು ಹೌತಿ ಬಂಡುಕೋರರಿಂದ ವಶಪಡಿಸಿಕೊಳ್ಳಲಾದ ಸರಕು ಸಾಗಾಣಿಕೆ ಹಡಗಿನಿಂದ ಕಳೆದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.

- Advertisement -

ರಾಯಲ್ ಏರ್ ಫೋರ್ಸ್ ಆಫ್ ಒಮಾನ್ ವಿಮಾನದಲ್ಲಿ ಹದಿನಾಲ್ಕು ಮಂದಿಯನ್ನು ಸನಾದಿಂದ ಮಸ್ಕತ್ ಗೆ ಸ್ಥಳಾಂತರಿಸಲಾಗಿದೆ. ಅವರನ್ನು ಆಯಾ ದೇಶಗಳಿಗೆ ಕಳುಹಿಸಿಕೊಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಒಮಾನ್‍ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.



Join Whatsapp