ನಾಳೆಯಿಂದ ಓಲಾ, ಉಬರ್, ಆಟೋ ಸೇವೆ ಸ್ಥಗಿತ

Prasthutha|

ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್ ಗಳಲ್ಲಿ ಆಟೊರಿಕ್ಷಾ ಸೇವೆ ಅನಧಿಕೃವೆಂದು ಘೋಷಿಸಲಾಗಿದ್ದು, ಬುಧವಾರದಿಂದ ಇವೆಲ್ಲವೂ ಸ್ಥಗಿತವಾಗಲಿದೆ ಎಂದು ಸಾರಿಗೆ ಆಯುಕ್ತ ಟಿಎಚ್ ಎಂ ಕುಮಾರ್ ತಿಳಿಸಿದರು.

- Advertisement -

ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಅವರು, ಆಟೊ ಸೇವೆ ಅನಧಿಕೃತ ಆಗಿರುವುದರಿಂದ ಆಟೊ ಚಾಲಕರು ಮತ್ತು ಪ್ರಯಾಣಿಕರು ಆ್ಯಪ್ ನಲ್ಲಿ ಈ ಸೇವೆ ಬಳಕೆ ಮಾಡಬಾರದು ಎಂದು ತಾಕೀತು ಮಾಡಿದರು.

‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ –2016’ರ ಪ್ರಕಾರ ಆಟೊ ಸೇವೆ ಒದಗಿಸಲು ಈ ಕಂಪನಿಗಳಿಗೆ ಅವಕಾಶ ಇಲ್ಲ. ಈ ಬಗ್ಗೆ ಅವರಿಗೆ ತಿಳಿಸಲಾಗಿದೆ. ಆಟೊ ಸೇವೆಯನ್ನು ಆ್ಯಪ್ ನಿಂದ ತೆಗೆಯಲು ಸೂಚನೆ ನೀಡಿದ್ದೇವೆ. ತೆಗೆಯದಿದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಈ ಆ್ಯಪ್ ಗಳಲ್ಲಿ ಆಟೊರಿಕ್ಷಾ ಸೇವೆ ಸ್ಥಗಿತಗೊಳಿಸಲಾಗುವುದು’ ಎಂದು ಹೇಳಿದರು.



Join Whatsapp