ಬೆಂಗಳೂರು : ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7. ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರವು ಇಂದು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ ರೂ 10 ಹಾಗೂ ರೂ 5 ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದರು.
ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿದೆ.
ಇದರಿಂದ ದಿ. 3-11-21ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು 113.93 ರಿಂದ 100.63 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ 13.30 ಆಗಲಿದೆ. ಹಾಗೂ ದಿ. 3-11-21ರಂದು ಇದ್ದ ಡೀಸೆಲ್ ನ ಚಿಲ್ಲರೆ ಮಾರಾಟ ದರವು 104.50 ರಿಂದ 85.03 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ 19.47 ಆಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.