ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ: 7 ಸಿಬ್ಬಂದಿ ಅಮಾನತು

Prasthutha|

ಬೆಳಗಾವಿ: ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಏಳು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಬುಧವಾರ ಆದೇಶ ಹೊರಡಿಸಿದ್ದಾರೆ.

- Advertisement -


ಜಿಲ್ಲಾ ಆರೋಗ್ಯಾಧಿಕಾರಿ ಕಾರು ಚಾಲಕ ಮಂಜುನಾಥ ಪಾಟೀಲ್, ಸಿಬ್ಬಂದಿ ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬವರನ್ನು ಅಮಾನತು ಮಾಡಲಾಗಿದೆ.


ಕಚೇರಿಯಲ್ಲಿ ಮದ್ಯಪಾನ ಮಾಡುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಡಿಎಚ್ಒ ಡಾ. ಮಹೇಶ ಕೋಣಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 7 ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Join Whatsapp