ಭಾರತದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ ಖಂಡಿಸಿದ ಒಐಸಿ

Prasthutha|

ನವದೆಹಲಿ: ಭಾರತದಲ್ಲಿ ರಾಮ ನವಮಿ ಸಂದರ್ಭದಲ್ಲಿ ವ್ಯಾಪಕವಾಗಿ ಮುಸ್ಲಿಮರ ಮೇಲೆ ಹಿಂಸಾಚಾರ ನಡೆದುದನ್ನು 59 ಸದಸ್ಯ ದೇಶಗಳನ್ನು ಒಳಗೊಂಡಿರುವ ಇಸ್ಲಾಮಿಕ್ ಸಹಕಾರ ಒಕ್ಕೂಟ- ಒಐಸಿವು ತೀವ್ರವಾಗಿ ಖಂಡಿಸಿದೆ.

- Advertisement -


ಮುಸ್ಲಿಮರ ಮೇಲೆ ಹಿಂಸೆ ನಡೆಸಿದ ಅಪರಾಧಿಗಳ ವಿರುದ್ಧ ಭಾರತ ಸರಕಾರವು ಕೂಡಲೆ ತೀವ್ರ ಕ್ರಮ ತೆಗೆದುಕೊಳ್ಳಬೇಕೆಂದು ಜಿದ್ದಾದಲ್ಲಿರುವ ಓಐಸಿ ಪ್ರಧಾನ ಕಾರ್ಯಾಲಯವು ಒತ್ತಾಯಿಸಿ ಹೇಳಿಕೆ ನೀಡಿದೆ.
“ಮುಸ್ಲಿಮರನ್ನು ಗುರಿಯಾಗಿಸಿ ನಡೆಯುವ ದಾಳಿ, ಲೂಟಿ, ಹಿಂಸೆಯ ಬಗ್ಗೆ ಒಐಸಿ ತೀವ್ರ ಕಳವಳಗೊಂಡಿದೆ. ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಭಾರತದಲ್ಲಿ ಇದು ಇಸ್ಲಾಮನ್ನು ಗುರಿಯಾಗಿಸಿಕೊಂಡು ನಡೆದಿದೆ. ಹಲವಾರು ರಾಜ್ಯಗಳಲ್ಲಿ ಇದು ನಡೆದಿದ್ದು, ಮಾರ್ಚ್ 31ರಂದು ಬಿಹಾರ್ ಶರೀಪ್’ನಲ್ಲಿ ಹಿಂದೂ ಉಗ್ರರು ಮುಸ್ಲಿಮರ ಮದ್ರಸ, ವಾಚನಾಲಯ ಮೊದಲಾದವುಗಳ ದಾಳಿ ಮಾಡದ್ದಾರೆ” ಎಂದು ಒಐಸಿ ಪ್ರಧಾನ ಕಾರ್ಯಾಲಯವು ಹೇಳಿಕೆ ಬಿಡುಗಡೆ ಮಾಡಿದೆ.


ಹಿಂದೂಗಳು ಇಷ್ಟೆಲ್ಲ ಹಿಂಸಾಚಾರವನ್ನು ನಡೆಸಿಯೂ ಇಸ್ಲಾಮೋಪೋಬಿಯಾ ಎಂಬ ಗೂಬೆಯನ್ನು ಕೂರಿಸಿ ಮುಸ್ಲಿಮರನ್ನು ಗುರಿಯಿಟ್ಟು ಭಾರತದಲ್ಲಿ ಲೂಟಿ, ದಾಳಿ ನಡೆದಿದೆ. ಇದರ ಹಿಂದಿನ ಪ್ರಚೋದಕರು, ಹಿಂಸಾ ಪ್ರಾಯೋಗಕರನ್ನು ಭಾರತ ಸರಕಾರವು ಗುರುತಿಸಿ ದಂಡಿಸಬೇಕು. ಭಾರತದ ಮುಸ್ಲಿಂ ಸಮುದಾಯಕ್ಕೆ ಸುರಕ್ಷತೆ, ಭದ್ರತೆ, ಹಕ್ಕುಗಳನ್ನು ಸರಿಯಾಗಿ ನೀಡಿ ಮುಸ್ಲಿಮ್ ಸಮುದಾಯದ ಘನತೆಯನ್ನು ಕಾಪಾಡಬೇಕು ಎಂದು ಒಐಸಿ ಪ್ರಧಾನ ಕಾರ್ಯಾಲಯವು ಹೇಳಿದೆ.



Join Whatsapp