ಕುಮಾರಸ್ವಾಮಿ ಜನತಾದರ್ಶನಕ್ಕೆ ಅಧಿಕಾರಿಗಳ ಗೈರು: ಸಿಎಂ, ಡಿಸಿಎಂ ಸ್ಪಷ್ಟನೆ

Prasthutha|

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜನತಾದರ್ಶನಕ್ಕೆ ಅಧಿಕಾರಿಗಳ ಗೈರು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಂಡ್ಯದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಪಾಲ್ಗೊಳ್ಳದಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವುದು ನಾನಲ್ಲ. ಶಿಷ್ಟಾಚಾರದಂತೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- Advertisement -

‘ನಾನು ಹಮ್ಮಿಕೊಂಡ ಜನತಾದರ್ಶನಕ್ಕೆ ಬಾರದಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಆರೋಪದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಅದು ಕುಮಾರಸ್ವಾಮಿ ಅವರಿಗಾಗಿ ಹೊರಡಿಸಿದ ಸುತ್ತೋಲೆಯಲ್ಲ. ಹಿಂದಿನಿಂದಲೂ ನಡೆದು ಬಂದಿರುವ ಕ್ರಮ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪ್ರಗತಿ ಪರಿಶೀಲನೆ ಸಭೆ ನಡೆಸುವುದಕ್ಕೂ ಬಿಟ್ಟಿರಲಿಲ್ಲ’ ಎಂದರು.


ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸಚಿವರಿಗೆ ಎಷ್ಟು ಶಿಷ್ಟಾಚಾರ ಪಾಲಿಸಬೇಕೋ ಅಷ್ಟು ಮಾಡುತ್ತಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜನತಾದರ್ಶನ ಮಾಡ್ಲಿ ಬಿಡಿ. ಜನರನ್ನು ಇಟ್ಕೊಂಡು ಹಳ್ಳಿಹಳ್ಳಿಗೆ ತಿರುಗಲಿ, ಬೇಡ ಅಂದವರು ಯಾರು. ನಮಗೂ ಇದಕ್ಕೂ ಸಂಬಂಧ ಇಲ್ಲ, ನಮಗೆ ಗೊತ್ತೇ ಇಲ್ಲ. ನಾವು ದೆಹಲಿಗೆ ಹೋಗಿ ಏನಾದ್ರೂ ಮಾಡುವುದಕ್ಕಾಗುತ್ತಾ ಎಂದು ಹೇಳಿದ್ದಾರೆ.

Join Whatsapp