ಪಿಎಫ್‌ಐ ಕಾರ್ಯಕರ್ತರಿಗೆ ತರಬೇತಿ ನೀಡಿದ ಆರೋಪದಲ್ಲಿ ಅಮಾನತಾಗಿದ್ದ ಅಧಿಕಾರಿ ಮರಳಿ ಸೇವೆಗೆ

Prasthutha|

ಕೊಚ್ಚಿ: ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾದ ಕಾರ್ಯಕರ್ತರಿಗೆ ಅಗ್ನಿಶಾಮಕ ದಳದ ತರಬೇತಿ ನೀಡಿದ್ದಕ್ಕಾಗಿ ಅಮಾನತುಗೊಂಡಿದ್ದ ಎರ್ನಾಕುಳಂ  ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಮತ್ತೆ ಸೇವೆಗೆ ಸೇರಿಸಲಾಗಿದೆ.

- Advertisement -

ಎ ಎಸ್ ಜೋಗಿ ಅವರನ್ನು ಮರುಸೇರ್ಪಡೆ ಮಾಡಲಾಗಿದ್ದು, ರಾಜ್ಯ ಆಡಳಿತ ನ್ಯಾಯಮಂಡಳಿಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಆಲುವಾದಲ್ಲಿ ಪಾಪ್ಯುಲರ್ ಫ್ರಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚರಣೆಯ ಅಧಿಕೃತ ತರಬೇತಿ ನೀಡಲಾಗಿದ್ದು, ಇದು ವಿವಾದವಾದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು.

- Advertisement -

ಆಲುವಾದ ಟೌನ್ ಹಾಲ್‌ನಲ್ಲಿ ಮಾರ್ಚ್ 30ರಂದು ಈ ತರಬೇತಿ ನೀಡಲಾಗಿದ್ದು, ಇದು ಕಾನೂನು ವಿರುದ್ಧ ಎಂದು ಬಿಜೆಪಿ ಸಹಿತ ಹಲವರು ವಿರೋಧಿಸಿದ್ದರು. ಈ ನಿಟ್ಟಿನಲ್ಲಿ ಘಟನೆಯ  ತನಿಖೆಗೆ ಆದೇಶಿಸಲಾಗಿತ್ತು.

ಈ ಸಂಬಂಧ ಐವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಕೆ.ಶೈಜು ಹಾಗೂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಎಸ್.ಜೋಗಿ ಅವರನ್ನು ಅಮಾನತುಗೊಳಿಸಲಾಗಿತ್ತು.



Join Whatsapp