ದೆಹಲಿ: ರೈತರು ನ. 29 ರಂದು ನಡೆಸಲು ಉದ್ದೇಶಿದ್ದ ಟ್ರ್ಯಾಕ್ಟರ್ ರ‍್ಯಾಲಿ ರದ್ದುಪಡಿಸಲಾಗಿದೆ ಎಂದು ಕಿಸಾನ್ ಯೂನಿಯನ್ ಹೇಳಿದೆ.
ಈ ಬಗ್ಗೆ ಸಿಂಘು ಗಡಿಯ ರೈತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ನವೆಂಬರ್ 29ರಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಯುವುದಿಲ್ಲ ಎಂದು ತಿಳಿಸಿದೆ.
ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದ್ದು, ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಎಂಎಸ್ ಪಿ ಸಂಬಂಧ ಸಮಿತಿಯನ್ನು ರಚಿಸಬೇಕು. ಈ ವಿಚಾರ ಸೇರಿದಂತೆ ನಮ್ಮ ಬೇಡಿಕೆಗಳ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ.
ಡಿಸೆಂಬರ್ 4ರವರೆಗೆ ಪ್ರಧಾನಿಗೆ ಉತ್ತರಿಸಲು ಅವಕಾಶ ನೀಡಿದ್ದೇವೆ. ಟ್ರ್ಯಾಕ್ಟರ್ ರ‍್ಯಾಲಿಯನ್ನು ನಿಜವಾಗಿ ಹಿಂಪಡೆದಿಲ್ಲ, ಸ್ಥಗಿತಗೊಳಿಸಿದ್ದೇವೆ. ಡಿಸೆಂಬರ್ 4 ರಂದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.