ಆಟೋ ಚಾಲಕನಿಗೆ ಕೋಟಿ ಬೆಲೆಯ ಆಸ್ತಿ ದಾನ ಮಾಡಿದ ಮಹಿಳೆ!

Prasthutha|

ಭುವನೇಶ್ವರ: ತಮ್ಮ ಕೋಟಿ ಬೆಲೆ ಬಾಳುವ ಆಸ್ತಿಯನ್ನು ಒಡಿಶಾದ ಮಹಿಳೆಯೊಬ್ಬರು ರಿಕ್ಷಾ ಚಾಲಕನ ಕುಟುಂಬಕ್ಕೆ ದಾನ ಮಾಡಿ ಸುದ್ದಿಯಾಗಿದ್ದಾರೆ.

- Advertisement -

ಮೂರು ಅಂತಸ್ತಿನ ಮನೆ, ಒಡವೆ ಸೇರಿದಂತೆ ತನ್ನೆಲ್ಲಾ ಆಸ್ತಿಯನ್ನು ಕಟಕ್ ನಿವಾಸಿಯಾದ ಮಿನಾಟಿ ಪಟ್ನಾಯಕ್ ಎಂಬ ಮಹಿಳೆ ರಿಕ್ಷಾ ಓಡಿಸುವ ಬುಧ ಸಮಾಲ್ ಕುಟುಂಬಕ್ಕೆ ದಾನ ಮಾಡಿದ್ದಾರೆ ಎಂದು ವರದಿಯಾಗಿದೆ.

ರಿಕ್ಷಾ ಚಾಲಕನ ಕುಟುಂಬ ಕಳೆದ 25 ವರ್ಷದಿಂದ ಮಿನಾಟಿ ಪಟ್ನಾಯಕ್ ಅವರ ಸೇವೆ ಮಾಡುತ್ತಾ ಬಂದಿದ್ದಾರೆ. ಗಂಡ ಮತ್ತು ತನ್ನ ಏಕೈಕ ಮಗಳನ್ನು ಕಳೆದುಕೊಂಡಿದ್ದ ಮಿನಾಟಿ ಅವರನ್ನು ರಿಕ್ಷಾ ಚಾಲಕನ ಕುಟುಂಬದವರು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದು, ಆಸ್ತಿಗೆ ಯಾರೂ ವಾರಸುದಾರರು ಇಲ್ಲದ ಕಾರಣ ಆಸ್ತಿ ದಾನ ಮಾಡಿದ್ದಾರೆ.

- Advertisement -

ತಾನು ಒಂಟಿಯಾಗಿ ಅನಾರೋಗ್ಯಕ್ಕೆ ತುತ್ತಾದಾಗ ಈ ಕುಟುಂಬ ಯಾವುದೇ ಪ್ರತಿಫಲ ಬಯಸದೆ ಸೇವೆ ಮಾಡಿದೆ. ಹೀಗಾಗಿ ತನ್ನ ಆಸ್ತಿ ನೀಡುತ್ತಿರುವುದಾಗಿ 63 ವರ್ಷದ ಮಿನಾಟಿ ತಿಳಿಸಿದ್ದಾರೆ.



Join Whatsapp