ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಹಂಚಿದ ತುಮಕೂರಿನ ಬಿಜೆಪಿ ನಾಯಕಿ: ಒಡಿಶಾ ಪೊಲೀಸರಿಂದ ತನಿಖೆ

Prasthutha|

ತುಮಕೂರು: ಒಡಿಶಾದಲ್ಲಿ ನಡೆದ ಘೋರ ರೈಲು ದುರಂತದ ಸಮೀಪದಲ್ಲಿ ಮಸೀದಿ ಇತ್ತು ಎಂದು ತುಮಕೂರು ಮೂಲದ ಬಿಜೆಪಿ ನಾಯಕಿಯೊಬ್ಬರು ಎಡಿಟ್‌ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಒಡಿಶಾ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

- Advertisement -

ತುಮಕೂರಿನ ನಿವಾಸಿ ಹಾಗೂ ಬಿಜೆಪಿ ನಾಯಕಿಯಾಗಿರುವ ಶಂಕುತಲಾ ನಟರಾಜ್‌ ಎಂಬವರು ಅಪಘಾತ ನಡೆದ ಸ್ಥಳದ ಸಮೀಪದಲ್ಲಿ ಮಸೀದಿ ಇದೆ ಎಂದು ಹೈಲೈಟ್ ಮಾಡಿದ ಫೋಟೋ ಅನ್ನು ಟ್ವೀಟ್ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಹೀಗೆ ಪೋಟೋ ಶೇರ್ ಮಾಡಿರುವ ಮಹಿಳೆ ಬಗ್ಗೆ ಒಡಿಶಾ ಪೊಲೀಸರು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ರೈಲು ದುರಂತದ ಘಟನಾ ಸ್ಥಳದಲ್ಲಿ ಮಸೀದಿ ಇದೆ ಎಂದು ಫೋಟೋ ಹಾಕಿ, ಘಟನೆಗೆ ಮಸೀದಿಯೇ ಕಾರಣ ಎಂಬಂತೆ ಬಿಂಬಿಸಲಾಗಿತ್ತು. ನಿನ್ನೆ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಶಕುಂತಲಾ ಈ ಪೋಟೋ ಶೇರ್ ಮಾಡಿದ್ದು, ವಿವಾದಕ್ಕೆ ಒಳಗಾಗಿತ್ತು. ನಂತರ ಪೋಟೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಲಾಗಿತ್ತು. ಇದು ಸುಳ್ಳು ಸುದ್ದಿ ಎಂದು ಒಡಿಶಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಶೇರ್ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.



Join Whatsapp