ಒಡಿಶಾ: ಆದಿವಾಸಿಗಳ ಮೇಲಿನ 48 ಸಾವಿರ ಪ್ರಕರಣ ವಾಪಸ್‌ಗೆ ಸಿಎಂ ಆದೇಶ

Prasthutha|

ಒಡಿಶಾ: ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಸಮುದಾಯದ ಜನರ ಮೇಲಿನ 48,018 ಕ್ಷುಲ್ಲಕ ಪ್ರಕರಣಗಳನ್ನು ವಾಪಸ್ ಪಡೆಯಲು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಆದೇಶ ನೀಡಿದ್ದಾರೆ.

- Advertisement -

ಹೆಚ್ಚಿನ ಪ್ರಕರಣಗಳು ಗೃಹ, ಅಬಕಾರಿ, ಅರಣ್ಯ ಮತ್ತು ಪರಿಸರ ಇಲಾಖೆಗಳಿಗೆ ಸಂಬಂಧಿಸಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಮಾಧ್ಯಮ ವರದಿಯಾಗಿದೆ.

ಪ್ರಕರಣಗಳ ಬಗ್ಗೆ ಪರೀಶೀಲಿಸಿದ ಬಳಿಕ 48,018 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

- Advertisement -

ಒಟ್ಟು ಪ್ರಕರಣಗಳಲ್ಲಿ 36,581 ಅಬಕಾರಿ ಇಲಾಖೆ, 9,846 ಗೃಹ ಇಲಾಖೆ ಮತ್ತು 1,591 ಅರಣ್ಯ ಮತ್ತು ಪರಿಸರ ಇಲಾಖೆ ಅಡಿಯಲ್ಲಿ ಬರುತ್ತವೆ. ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವುದರಿಂದ ನ್ಯಾಯಾಲಯಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಸಿಎಂ ಕಚೇರಿ ಹೇಳಿದೆ.

ಒಡಿಶಾದಲ್ಲಿ ರಾಜ್ಯದ ಜನಸಂಖ್ಯೆಯ ಶೇಕಡಾ 23 ರಷ್ಟು ಬುಡಕಟ್ಟು ಜನಾಂಗದವರು ಇದ್ದಾರೆ.



Join Whatsapp