ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಜೀವ ರಕ್ಷಿಸಿದ ದಾದಿಯರು ಆರೋಗ್ಯ ವಲಯದ ನೈಜ ರಾಯಭಾರಿಗ಼ಳು: ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

Prasthutha|

ಅಂತಾರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ

- Advertisement -

ಬೆಂಗಳೂರು:ಕೋವಿಡ್ ಸಂಕಷ್ಟದ ನಂತರ ಜಾಗತಿಕವಾಗಿ ದಾದಿಯರ ಪಾತ್ರ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ಇವರ ಸಲ್ಲಿಸುತ್ತಿರುವ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಐದು ರಾಜ್ಯಗಳು ಹಾಗೂ ರಾಜ್ಯದ   ಪ್ರತಿಯೊಂದು ಜಿಲ್ಲೆಯಿಂದ ಇಬ್ಬರಿಗೆ

- Advertisement -

ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ   ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ನರ್ಸ್ ದಿನಾಚರಣೆಯಲ್ಲಿ ಸಾಮಾಜಿಕ ವಲಯದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಮದರ್ ತೆರೇಸಾ ಸ್ಮರಣಾರ್ಥ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ 2022 ಪ್ರದಾನ ಮಾಡಿದರು.  ಬಿಎಂಸಿಅರ್ ಐ ನಿರ್ದೇಶಕರಾದ ಡಾ.ಕೆ.ರವಿ,  ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ, ವಾಣಿವಿಲಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡ್ ಡಾ.ಸಿ.ಸವಿತಾ, ಕರ್ನಾಟಕ ರಾಜ್ಯ ನರ್ಸಿಂಗ್  ಕೌನ್ಸಿಲ್ ಮಾಜಿ ಸಹಾಯಕ ನಿರ್ದೇಶಕಿ ಉಷಾ ಎಂ.ಭಂಡಾರಿ, ಕ್ರಿಕೆಟ್ ಅಸೋಸಿಯೇಷನ್ ನ ಎಡ್ವರ್ಡ್ ದಿವಾಕರ್ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಸಂತೋಷ್ ಹೆಗ್ಡೆ, ಕೋವಿಡ್ ಸಂದರ್ಭದಲ್ಲಿ ದಾದಿಯರ ಸೇವೆ ಅನನ್ಯ. ಜೀವ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸಿ ಮಾನವೀಯ ಕಾರ್ಯನಿರ್ವಹಿಸಿದ್ದಾರೆ. ಇವರೆಲ್ಲರ ಪರಿಶ್ರಮವನ್ನು ನಾವು ಸದಾ ಕಾಲ ಸ್ಮರಿಸಿಕೊಳ್ಳಬೇಕು. ಅದರಲ್ಲೂ ನಿರ್ದಿಷ್ಟವಾಗಿ ಸರ್ಕಾರಿ ವಲಯದಲ್ಲಿ ದಾದಿಯರು ವಿಶೇಷ ಪರಿಶ್ರಮದಿಂದ ಕಾರ್ಯನಿರ್ವಹಿದ್ದಾರೆ ಎಂದರು.

ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಬೇಕು. ಆರೋಗ್ಯ ಕ್ಷೇತ್ರದ ರಾಯಭಾರಿಗಳಾಗಿ ಇವರು ಕೆಲಸ ಮಾಡಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಇವರ ಪಾತ್ರ ಅಮೋಘವಾದದ್ದು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿವಿಯ  ವಿಶ್ರಾಂತ ಕುಲಪತಿ ಡಾ. ಸಚ್ಚಿದಾನಂದ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಫ್ಲಾರೆನ್ಸ್ ನೈಟಿಂಗೇಲ್ ಕೊಡುಗೆ ಸ್ಮರಣೀಯವಾದದ್ದು. ಯುದ್ಧ ಸಂದರ್ಭದಲ್ಲಿ ಇವರು ಗಾಯಗೊಂಡ ಸೈನಿಕರಿಗೆ ಹಗಲಿರುಳು ಆರೈಕೆ ಮಾಡಿದರು. ಅಲ್ಲದೇ ಮೊದಲ ನರ್ಸಿಂಗ್ ಶಾಲೆ ಆರಂಭಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮದರ್‌ ತೆರೇಸಾ ಅವರು ಸಹ ನಿರ್ಗತಿಕರ ಸೇವೆ ಸಲ್ಲಿಸಿ ಮನೆಮಾತಗಿದ್ದಾರೆ. ಈ ಇಬ್ಬರೂ ಸದಾ ಕಾಲ ನೆನಪಿನಲ್ಲಿ ಉಳಿಯುತ್ತಾರೆ ಎಂದರು.

ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥಾಪಕ ಶ್ರಾವಣ ಲಕ್ಷ್ಮಣ, ಚಿತ್ರನಟಿ ಹರ್ಷಿಕಾ ಪೊಣ್ಣಚ್ಚ ಮತ್ತಿತರರು ಉಪಸ್ಥಿತರಿದ್ದರು.

Join Whatsapp