ಕೆಲಸಕ್ಕೆಂದು ತೆರಳಿದ್ದ ನರ್ಸ್ ಶವವಾಗಿ ಪತ್ತೆ: ಉನ್ನಾವೊದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ?

Prasthutha|

ಉತ್ತರ ಪ್ರದೇಶ: ಕಳೆದ ಬಾರಿ ಭಾರೀ ಸಂಚಲನ ಸೃಷ್ಟಿಸಿದ್ದ ಉನ್ನಾವೋದಲ್ಲಿ ನಡೆದಿದ್ದ ದಲಿತ ಬಾಲಕಿಯ ಅತ್ಯಾಚಾರದ ಘಟನೆ ಮಾಸುವ ಮುನ್ನವೇ ಅದೇ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನರ್ಸಿಂಗ್ ಹೋಂ ನಲ್ಲಿ ಕೆಲಸ ನಿರ್ವಹಿಸಲು ಬಂದಿದ್ದ ನರ್ಸ್ , ಮೊದಲ ದಿನವೇ ಶವವಾಗಿ ಪತ್ತೆಯಾಗಿದ್ದಾಳೆ.

- Advertisement -

ಕಿಟಕಿಗೆ ನೇಣುಹಾಕಿದ ರೀತಿಯಲ್ಲಿ ನರ್ಸ್ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಅತ್ಯಾಚಾರ ಎಂದು ಕುಟುಂಬಿಕರು ಆರೋಪಿಸಿದ್ದಾರೆ. .ನಮ್ಮ ಮಗಳನ್ನು ಅತ್ಯಾಚಾರ ಮಾಡಿ, ಬಳಿಕ ಹತ್ಯೆ ಮಾಡಲಾಗಿದೆ ಎಂದು ಕುಟುಂಬಿಕರು ದೂರಿದ್ದಾರೆ. ಪೋಷಕರ ದೂರಿನ ಮೇರೆಗೆ ನರ್ಸಿಂಗ್ ಹೋಂನ ಆಡಳಿತಾಧಿಕಾರಿ ಸೇರಿ ಮೂವರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ.

ಉನ್ನಾವೋದಲ್ಲಿರುವ ನ್ಯೂ ಜೀವನ್ ಹಾಸ್ಪಿಟಲ್ನಲ್ಲಿ ಕೆಲಸಕ್ಕೆಂದು ತೆರಳಿದ್ದ ನರ್ಸ್, ಮೊದಲನೇ ದಿನವೇ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉನ್ನಾವೋ ಹೆಚ್ಚುವರಿ ಎಸ್ಪಿ ಶಶಿ ಶೇಖರ್, ನರ್ಸ್ ಕುಟುಂಬಿಕರು ರೇಪ್ ಆ್ಯಂಡ್ ಮರ್ಡರ್ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ

Join Whatsapp