‘ಶವರ್ಮಾ’ ತಿಂದು ನರ್ಸ್ ಮೃತ್ಯು, ಹಲವು ಮಂದಿ ಅಸ್ವಸ್ಥ: ಹೊಟೇಲ್’ಗೆ ಬೀಗ ಜಡಿದ ಪೊಲೀಸರು

Prasthutha|

ಕೋಟ್ಟಯಂ: ಹೊಟೇಲೊಂದರಲ್ಲಿ ‘ಶವರ್ಮಾ’ ಸೇವಿಸಿ ನರ್ಸ್ ಮೃತಪಟ್ಟು, ಹಲವು ಮಂದಿ ಅಸ್ವಸ್ಥರಾದ ಘಟನೆ ಕೇರಳದ ಕೋಟ್ಟಯಂನಲ್ಲಿ ನಡೆದಿದೆ.

- Advertisement -


ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರಶ್ಮಿ (33) ಮೃತರು ಎಂದು ಗುರುತಿಸಲಾಗಿದೆ.


ಡಿ.29 ರಂದು ಸ್ನೇಹಿತರ ಜೊತೆ ತೆರಳಿದ್ದ ರಶ್ಮಿ, ಕುರಿ ಮಂದಿ, ಅಲ್ ಫಾಮ್ ಹಾಗೂ ಶವರ್ಮಾ ಸೇವಿಸಿದ್ದರು ಎನ್ನಲಾಗಿದೆ. ಆಹಾರ ಸೇವಿಸಿದ ಒಂದು ಗಂಟೆಯ ಬಳಿಕ ರಶ್ಮಿ ವಾಂತಿ ಮಾಡಲು ಪ್ರಾರಂಭಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಕೋಟ್ಟಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಶ್ಮಿ ಸಾವನ್ನಪ್ಪಿದ್ದಾರೆ.
ಇನ್ನು ಹೋಟೆಲ್ ಅನ್ನು ಪರಿಶೀಲಿಸಿ ಬೀಗ ಜಡಿದಿರುವ ಪೊಲೀಸರು, ಅದರ ಪರವಾನಗಿಯನ್ನು ರದ್ದು ಮಾಡಿದ್ದಾರೆ.

Join Whatsapp