ಕೋಮು ಹಿಂಸಾಚಾರ: ವಿಶ್ವ ಹಿಂದೂ ಪರಿಷತ್ ಯಾತ್ರೆಗೆ ಅನುಮತಿ ನಿರಾಕರಿಸಿದ ನೂಹ್ ಜಿಲ್ಲಾಡಳಿತ

Prasthutha|

ಗುರುಗ್ರಾಮ: ಕೋಮು ಹಿಂಸಾಚಾರ ಪೀಡಿತ ನೂಹ್ ನಲ್ಲಿ ವಿಶ್ವ ಹಿಂದೂ ಪರಿಷತ್ ಆಗಸ್ಟ್ 28ರಂದು ನಡೆಸಲು ಉದ್ದೇಶಿಸಿದ್ದ ‘ಬ್ರಿಜ್ ಮಂಡಲ್ ಜಲಾಭಿಷೇಕ’ ಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

- Advertisement -


ಯಾತ್ರೆಗೆ ಅನುಮತಿ ಕೋರಿ ಆಯೋಜಕರು ಸಲ್ಲಿಸಿದ್ದ ಮನವಿಯನ್ನು ನೂಹ್ ಜಿಲ್ಲಾಡಳಿತ ಮಂಗಳವಾರ ಸಂಜೆ ತಿರಸ್ಕರಿಸಿದೆ.
ಪಲ್ವಾಲ್ನ ಪೊಂಡ್ರಿ ಗ್ರಾಮದಲ್ಲಿ ಆಗಸ್ಟ್ 13ರಂದು ‘ಮಹಾಪಂಚಾಯತ್’ ಆಯೋಜಿಸಿದ್ದ ಸಂಘಟನೆ, ನೂಹ್ ಜಿಲ್ಲೆಯ ನಲ್ಹಾರ್ ದೇವಾಲಯದಲ್ಲಿ ಯಾತ್ರೆ ನಡೆಸುವ ಯೋಜನೆಯಲ್ಲಿತ್ತು.


ಯಾತ್ರೆಗೆ ಅನುಮತಿ ಕೋರಿ ವಿಎಚ್ ಪಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನೂಹ್ ಎಸ್ಪಿ ನರೇಂದರ್ ಖಚಿತಪಡಿಸಿದ್ದಾರೆ. ವಿಎಚ್ ಪಿ, ಜುಲೈ 31ರಂದು ನೂಹ್ನಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪೊಂದು ದಾಳಿ ನಡೆಸಿದ್ದರಿಂದ ಕೋಮು ಸಂಘರ್ಷ ಉಂಟಾಗಿತ್ತು.



Join Whatsapp