ಮಹಿಳೆಯರ ನಗ್ನ ವೀಡಿಯೋ ಚಿತ್ರೀಕರಣ: ಆರೋಪಿ ಬಂಧನ

Prasthutha|

ಬೆಂಗಳೂರು: ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವೀಡಿಯೋಗಳನ್ನು ಚಿತ್ರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ಅವರಿಂದ ಲೈಂಗಿಕ ಸುಖ ಪಡೆಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

- Advertisement -

ಮಹೇಶ್ (30) ಬಂಧಿತ ಆರೋಪಿಯಾಗಿದ್ದು, ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಅಥವಾ ಪರಿಚಯಸ್ಥರ ಮನೆಗೆ ಹೋದಾಗ ಸ್ಪೈ ಕ್ಯಾಮೆರಾವನ್ನು ಇಟ್ಟು ಆರೋಪಿ ರಹಸ್ಯವಾಗಿ ಮಹಿಳೆಯರ ವಿಡಿಯೋ ಮಾಡಿಕೊಳ್ಳುತ್ತಿದ್ದ. ನಂತರ  ನಕಲಿ ಖಾತೆ ಉಪಯೋಗಿಸಿ,ಕೆಲ ವೀಡಿಯೋ ತುಣುಕುಗಳನ್ನು  ಮಹಿಳೆಯರಿಗೆ ಕಳುಹಿಸಿ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಅಲ್ಲದೆ, ತನ್ನೊಂದಿಗೂ ಅಶ್ಲೀಲವಾಗಿ ಮಾತಾಡುವಂತೆಯೂ, ತನ್ನ  ಲೈಂಗಿಕ ಬಯಕೆಯನ್ನು ಈಡೇರಿಸುವಂತೆಯೂ ಒತ್ತಾಯಿಸುತ್ತಿದ್ದ. ಇಲ್ಲವಾದರೆ ತನ್ನ ಬಳಿ ಇರುವ ವಿಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ.

ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದ ಹಿನ್ನೆಲೆಯಲ್ಲಿ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್ಟಾಪ್, ಎರಡು ಪೆನ್ಡ್ರೈವ್, ಎರಡು ಮೆಮೊರಿ ಕಾರ್ಡ್ ಮತ್ತು ಎರಡು ಮೊಬೈಲ್  ವಶಪಡಿಸಿಕೊಳ್ಳಲಾಗಿದೆ.



Join Whatsapp