ನವದೆಹಲಿ: ಅಣು ಶಸ್ತ್ರಾಗಾರವನ್ನು ನಿರ್ವಹಿಸೊ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಯುನಿಟ್‌ನಲ್ಲಿದ್ದ ಮೇಜರ್ ಒಬ್ಬ ಪಾಕ್ ಪರ ಗೂಢಚಾರಿಕೆ ಮಾಡಿ ದೇಶದ್ರೋಹ ಎಸಗಿದ್ದು, ಆ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.
ದೇಶದ್ರೋಹ ಎಸಗಿ ವಜಾ ಆದ ಅಧಿಕಾರಿಯ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ. ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಈತ ತನ್ನ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಟೋರ್ ಮಾಡುತ್ತಿದ್ದು, ಪಾಕಿಸ್ತಾನದ ಇಂಟಲಿಜೆನ್ಸ್ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಯೊಬ್ರು ತಿಳಿಸಿದ್ದಾರೆ. 2022ರ ಮಾರ್ಚ್‌ನಿಂದಲೇ SFC ನಿಯೋಜಿಸಿದ್ದ ಅಧಿಕಾರಿಗಳ ಬೋರ್ಡ್ ಇವರ ಡಿವೈಸ್‌ಗಳನ್ನ ವಶಕ್ಕೆ ತಗೊಂಡು ತನಿಖೆ ನಡೆಸುತ್ತಿತ್ತು.
ಜೊತೆಗೆ ಈ ವಾಟ್ಸಾಪ್ ಗ್ರೂಪ್ನಲ್ಲಿ ಆಕ್ಷೇಪಾರ್ಹ ವಿಷಯಗಳ ಬಗ್ಗೆ ಚರ್ಚೆ ಮಾಡಿದ ಆರೋಪದಲ್ಲಿ ಮತ್ತೊಬ್ಬ ಆರ್ಮಿ ಬ್ರಿಗೇಡಿಯರ್ ಹಾಗೂ ಲೆಫ್ಟಿನೆಂಟ್ ಕರ್ನಲ್‌ಗೆ ಸೇನೆ ಶೋಕಾಸ್ ನೋಟೀಸ್ ನೀಡಿದೆ. ಈಗಾಗಲೇ ಈ ಪಟಿಯಾಲ ಪೆಗ್ ವಾಟ್ಸಾಪ್ ಗ್ರೂಪ್‌ನಿಂದ ಪಾಕ್‌ನ ಗುಪ್ತಚರ ಏಜೆಂಟ್‌ಗೆ ಗೌಪ್ಯ ಮಾಹಿತಿ ಸೋರಿಕೆ ಆಗಿರೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ 2022ರ ಜುಲೈನಲ್ಲೆ ಈ ಗ್ರೂಪ್‌ಗೆ ಸಂಬಂಧಿಸಿದ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಈಗ ಇದೇ ಗ್ರೂಪ್‌ನ ಮೇಜರ್‌ನ್ನ ಸೇವೆಯಿಂದ ವಜಾಗೊಳಿಸಲಾಗಿದೆ.