ಕುವೆಂಪುಗೆ ಅವಮಾನ: NSUI ಯಿಂದ ಸಚಿವ ಬಿ ಸಿ ನಾಗೇಶ್ ಮನೆ ಎದುರು ಪ್ರತಿಭಟನೆ: ಆರೆಸ್ಸೆಸ್ ಚೆಡ್ಡಿಗೆ ಬೆಂಕಿ

Prasthutha|

ತುಮಕೂರು: ಪರಿಷ್ಕೃತ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರಿಗೆ ಅವಮಾನ ಮಾಡಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಿಪಟೂರಿನಲ್ಲಿ ಇರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಗೆ NSUI ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ನಾಗೇಶ್ ಮನೆ ಎದುರು ಜಮಾಯಿಸಿದ್ದರು. ಹತ್ತು ನಿಮಿಷಗಳ ಕಾಲ ನಾಗೇಶ್ ಅವರ ಮನೆ ಎದುರು ಘೋಷಣೆ ಕೂಗುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅವರನ್ನು ಚದುರಿಸಿದರು. ಈ ನಡುವೆ ಪೊಲೀಸರು ಹಾಗೂ NSUI ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

- Advertisement -

  ಆರೆಸ್ಸೆಸ್ ಚೆಡ್ಡಿಗೆ ಬೆಂಕಿ

ನಾಗೇಶ್ ಅವರ ತಿಪಟೂರು ನಿವಾಸದ ಮುಂಭಾಗ ಘೋಷಣೆ ಕೂಗಿದ ಕಾರ್ಯಕರ್ತರು  R S S ಚೆಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಘಟನೆಗೆ ಸಂಬಂಧಸಿದಂತೆ ಇದುವರೆಗೆ ಒಟ್ಟು 15 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.



Join Whatsapp