ಎನ್ ಇಪಿಯಿಂದ ಶಿಕ್ಷಣದ ಅಡಿಪಾಯಕ್ಕೆ ಧಕ್ಕೆ: ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್

Prasthutha|

ಮಂಗಳೂರು: ಎನ್‌ಇಪಿ- ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕಾಂಗ್ರೆಸ್, ಎನ್‌ಎಸ್‌ಯುಐ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅಭಿಯಾನ ಈಗ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎನ್ ಇಪಿ ಕಿತ್ತೆಸೆಯುವಂತೆ ಕರೆ ನೀಡಿದರು.

- Advertisement -


1986ರ ನಿಯಮದಂತೆ ವಿಶ್ವ ವಿದ್ಯಾನಿಲಯಗಳ ಹತೋಟಿಯಲ್ಲಿತ್ತು, ಈಗ 2020ರ ನೀತಿಯಂತೆ ಕಾಲೇಜುಗಳು ವಿವಿ ನಿಯಮದಡಿ ಬರುವುದಿಲ್ಲ. ಆಗ ಬೋರ್ಡ್ ಪರೀಕ್ಷೆ ಮೂಲಕ ಪ್ರವೇಶ ಪಡೆಯಬಹುದಿತ್ತು. ಈಗ ಎಂಟ್ರೆನ್ಸ್ ಪರೀಕ್ಷೆ ಮೂಲಕ ಪ್ರವೇಶ ಪಡೆಯಬೇಕು. ಹಿಂದೆ ಮೌಲ್ಯ ಮಾಪನವು ವಿಶ್ವ ವಿದ್ಯಾನಿಲಯದ ಸಿಬ್ಬಂದಿಯಿಂದ ನಡೆಯುತ್ತಿತ್ತು. ಈಗ ಕಾಲೇಜು ಸಿಬ್ಬಂದಿಯಿಂದಲೇ ಮೌಲ್ಯ ಮಾಪನ. ಇವೆಲ್ಲವೂ ಕಾಲೇಜುಗಳು ವಿದ್ಯಾರ್ಥಿಗಳ ಮೇಲೆ ಸವಾರಿ ಮಾಡಲು, ಸುಲಿಯಲು ಅವಕಾಶ ಮಾಡಿಕೊಡುತ್ತದೆ ಎಂದು ಕೀರ್ತಿ ಗಣೇಶ್ ಆರೋಪಿಸಿದರು.


ಸಂಸತ್ತಿನಲ್ಲಿ ಚರ್ಚೆ ನಡೆಸದೆ ಕೊರೋನಾ ಕಾಲದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು ಏಕೆ? ಈ ಬಗ್ಗೆ ಕಾಲೇಜಿನವರಿಗೆ ಸರಿಯಾದ ಮಾಹಿತಿ ಇಲ್ಲ. ನಾಗಪುರದ ನೀತಿಯನ್ನು ದಿಢೀರನೆ ಜಾರಿ ಮಾಡುವ ಮೂಲಕ ಶಿಕ್ಷಣಕ್ಕೆ ಹಾಕಿರುವ ಅಡಿಪಾಯ ನಲುಗುತ್ತದೆ ಎಂದು ಹೇಳಿದರು.
ಎನ್‌ಎಸ್‌ಯುಐನ ಇತರ ನಾಯಕರು ಮಾತನಾಡಿ, ಕಡ್ಡಾಯವಾಗಿ ಮೂರು ಭಾಷೆ ಹೇರುವುದೆಂದರೆ ಹಿಂದಿಯನ್ನು ಹಿಂದಿನ ಬಾಗಿಲಲ್ಲಿ ತುರಿಕಿಸುವುದಾಗಿದೆ. ಹೊಸ ನಿಯಮಗಳು ವಿದ್ಯಾರ್ಥಿಗಳಿಗೆ ಮಾರಕ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಭರತ್ ರಾಂ ಗೌಡ, ರಫೀಕ್ ಆಲಿ, ಸುಹಾನ್ ಆಳ್ವ, ನವೀದ್, ಜಾಕಿರ್, ವಿನಯ್, ಝೈನ್, ಪವನ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು

Join Whatsapp