ಎನ್ ಇಪಿ ವಿರೋಧಿಸಿ NSUI ಕಾರ್ಯಕರ್ತರಿಂದ ಸಚಿವರಿಗೆ ಘೇರಾವ್

Prasthutha|

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಶಿವಮೊಗ್ಗದಲ್ಲಿಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರಿಗೆ ಎನ್ ಎಸ್ ಯುಐ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆಯಿತು.

- Advertisement -


ಯಾವುದೇ ಚರ್ಚೆ ಮಾಡದೇ ನೂತನ ರಾಷ್ಟೀಯ ಶಿಕ್ಷಣ ನೀತಿಯನ್ನು ಏಕಾಏಕಿಯಾಗಿ ಜಾರಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವುದು ಸರಿಯಲ್ಲ. ನೀತಿಯಲ್ಲಿ ಕಡ್ಡಾಯ ಮತ್ತು ಸಮಾನ ಶಿಕ್ಷಣದ ಬಗ್ಗೆ ಯಾವುದೇ ವಿವರಗಳಿಲ್ಲ. ಈ ಶಿಕ್ಷಣ ನೀತಿ ಜಾರಿಗೊಳಿಸಿರುವುದರಿಂದ ಶಿಕ್ಷಣ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ನೀತಿ ವ್ಯಾಪಾರೀಕರಣ, ಖಾಸಗೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ಮೇಲೆ ಪ್ರಯೋಗ ನಡೆಸಿ ಅವರ ಭವಿಷ್ಯವನ್ನು ಹಾಳು ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ಎನ್ ಎಸ್ ಯುಐ ವತಿಯಿಂದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಗೆ ಘೇರಾವ್ ಹಾಕಲು ಯತ್ನಿಸಿದರು.


ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಹರಸಾಹಸಪಟ್ಟರು. ಈ ಸಂದರ್ಭದಲ್ಲಿ ಎನ್ ಎಸ್ ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ, ನಗರ ಅಧ್ಯಕ್ಷ ವಿಜಯ್ , ಜಿಲ್ಲಾ ಕಾರ್ಯಾಧ್ಯಕ್ಷ ರವಿ , ಅಲ್ಪಸಂಖ್ಯಾತ ಕಾಂಗ್ರೆಸ್ ನ ನಗರ ಅಧ್ಯಕ್ಷ ಮುಹಮ್ಮದ್ ನಿಹಾಲ್, ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ , ಉತ್ತರ ಬ್ಲಾಕ್ ನ ಗಿರೀಶ್, ಭರತ್, ಸಂದೀಪ್, ಅಬ್ದುಲ್ಲಾ, ನಾಗೇಂದ್ರ NSUI ನ ರವಿ, ವೆಂಕಟೇಶ್, ಚಂದ್ರೋಜಿ ರಾವ್, ಅರ್ಜುನ್, ಚಂದನ್, ಅನಿಲ್ ಆಚಾರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Join Whatsapp