ದುಬೈ : 33 ಕೋಟಿ ರೂ. ಲಾಟರಿ ಗೆದ್ದ ಅನಿವಾಸಿ ಭಾರತೀಯ!

Prasthutha|

ಅಬುಧಾಬಿ: ನಿನ್ನೆ(ಸೋಮವಾರ) ನಡೆದ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಮೊದಲ ಬಹುಮಾನ 1.5 ಕೋಟಿ ದಿರ್ಹಮ್ (33 ಕೋಟಿ ರೂ.) ಅನಿವಾಸಿ ಭಾರತೀಯನೊಬ್ಬನ ಪಾಲಾಗಿದೆ.

- Advertisement -

ಯುಎಇಯ ಉಮ್ಮುಲ್ ಕುವೈನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮುಹಮ್ಮದ್ ಅಲಿ ಮೊಯ್ದೀನ್ ಅವರು ಬಿಗ್ ಟಿಕೆಟ್ 253ನೇ ಸರಣಿ ಡ್ರಾದಲ್ಲಿ ಮೊದಲ ಬಹುಮಾನವನ್ನು ಗೆದ್ದಿದ್ದಾರೆ.

ಜೂನ್ 7 ರಂದು ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್ ಸಂಖ್ಯೆ 061908 ರಲ್ಲಿ ಸೋಮವಾರ ರಾತ್ರಿ ಅವರಿಗೆ ಅದೃಷ್ಟ ಕೂಡಿ ಬಂದಿದೆ.

- Advertisement -
ಡ್ರಾದಲ್ಲಿ ಒಂದರಿಂದ ಏಳನೇ ಸ್ಥಾನದವರೆಗಿನ ಎಲ್ಲಾ ಬಹುಮಾನಗಳು ಭಾರತೀಯರ ಪಾಲಾಗಿವೆ. ಜಯಜ್ಯೋತಿ ಸುಭಾಷ್ ನಾಯರ್ ಎಂಬವರು ಖರೀದಿಸಿದ 177779 ಸಂಖ್ಯೆ ದ್ವಿತೀಯ ಬಹುಮಾನ ಒಂದು ಲಕ್ಷ ದಿರ್ಹಮ್ ಗೆದ್ದಿದೆ.

ಇದಕ್ಕಿಂತ ಮೊದಲು ನಡೆದ ಬಿಗ್ ಟಿಕೆಟ್ ಡ್ರೀಮ್ ಕಾರ್ ಡ್ರಾದಲ್ಲೂ ಕೂಡ ಪ್ರಥಮ ಬಹುಮಾನ ಭಾರತೀಯನ ಪಾಲಾಗಿದೆ. ಟಿಕೆಟ್ ಸಂಖ್ಯೆ 004796 ಮೂಲಕ ದಿನೇಶ್ ಕುಮಾರ್ ಎಂಬವರು ಬಿಎಂಡಬ್ಲ್ಯು ಕಾರನ್ನು ಗೆದ್ದುಕೊಂಡಿದ್ದಾರೆ.

ಮುಂದಿನ ಆಗಸ್ಟ್ 3 ರಂದು ನಡೆಯಲಿರುವ ಬಿಗ್ ಟಿಕೆಟ್ ಡ್ರಾದಲ್ಲೂ ಪ್ರಥಮ ಬಹುಮಾನ 1.5 ಕೋಟಿ ದಿರ್ಹಮ್ ಆಗಿದೆ. ಈ ಡ್ರಾಗೆ ಟಿಕೆಟ್‌ಗಳು ಈಗ ಲಭ್ಯವಿದೆ.

Join Whatsapp