ಇನ್ನು ಮುಂದೆ ಟ್ವಿಟರ್ ನಲ್ಲಿ  ಬ್ಲೂ ಟಿಕ್ ಬೇಕಾದರೆ  ಶುಲ್ಕ ಪಾವತಿಸಬೇಕು…!

Prasthutha|

ವಾಷಿಂಗ್ಟನ್ :  ಟ್ವಿಟರ್ ತನ್ನ ಖಾತೆದಾರರ ಗುರುತನ್ನು ಪರಿಶೀಲಿಸುವ ಪ್ರತಿಷ್ಠಿತ ನೀಲಿ ಚೆಕ್ ಮಾರ್ಕ್ ಗೆ ಶುಲ್ಕ ವಿಧಿಸಲು ಯೋಚಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ , ಟ್ವಿಟರ್ ತನ್ನ ಬಳಕೆದಾರರ ಪರಿಶೀಲನಾ ಪ್ರಕ್ರಿಯೆಯನ್ನು ನವೀಕರಿಸಲಿದೆ ಎಂದು ಹೇಳಿದ್ದಾರೆ.

ಟ್ವಿಟರ್ ತನ್ನ ಖಾತೆದಾರರ ಗುರುತನ್ನು ಪರಿಶೀಲಿಸುವ ಪ್ರತಿಷ್ಠಿತ ನೀಲಿ ಚೆಕ್ ಮಾರ್ಕ್ ಗೆ ಶುಲ್ಕ ವಿಧಿಸಲು ಪರಿಗಣಿಸುತ್ತಿದೆ ಎಂದು ಟೆಕ್ನಾಲಜಿ ನ್ಯೂಸ್ ಲೆಟರ್ ಪ್ಲಾಟ್ ಫಾರ್ಮ್ ವರದಿ ಮಾಡಿದೆ.

- Advertisement -

ಬಳಕೆದಾರರು ತಿಂಗಳಿಗೆ $4.99  ಪಾವತಿಸಿ (ವರ್ಷಕ್ಕೆ ಸುಮಾರು 4,930 ರೂ.) ಟ್ವಿಟರ್ ಬ್ಲೂಗೆ ಚಂದಾದಾರರಾಗಬೇಕು ಎಂದು ವರದಿ ತಿಳಿಸಿದೆ.

Join Whatsapp