ವಾಷಿಂಗ್ಟನ್ : ಟ್ವಿಟರ್ ತನ್ನ ಖಾತೆದಾರರ ಗುರುತನ್ನು ಪರಿಶೀಲಿಸುವ ಪ್ರತಿಷ್ಠಿತ ನೀಲಿ ಚೆಕ್ ಮಾರ್ಕ್ ಗೆ ಶುಲ್ಕ ವಿಧಿಸಲು ಯೋಚಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ , ಟ್ವಿಟರ್ ತನ್ನ ಬಳಕೆದಾರರ ಪರಿಶೀಲನಾ ಪ್ರಕ್ರಿಯೆಯನ್ನು ನವೀಕರಿಸಲಿದೆ ಎಂದು ಹೇಳಿದ್ದಾರೆ.
ಟ್ವಿಟರ್ ತನ್ನ ಖಾತೆದಾರರ ಗುರುತನ್ನು ಪರಿಶೀಲಿಸುವ ಪ್ರತಿಷ್ಠಿತ ನೀಲಿ ಚೆಕ್ ಮಾರ್ಕ್ ಗೆ ಶುಲ್ಕ ವಿಧಿಸಲು ಪರಿಗಣಿಸುತ್ತಿದೆ ಎಂದು ಟೆಕ್ನಾಲಜಿ ನ್ಯೂಸ್ ಲೆಟರ್ ಪ್ಲಾಟ್ ಫಾರ್ಮ್ ವರದಿ ಮಾಡಿದೆ.
ಬಳಕೆದಾರರು ತಿಂಗಳಿಗೆ $4.99 ಪಾವತಿಸಿ (ವರ್ಷಕ್ಕೆ ಸುಮಾರು 4,930 ರೂ.) ಟ್ವಿಟರ್ ಬ್ಲೂಗೆ ಚಂದಾದಾರರಾಗಬೇಕು ಎಂದು ವರದಿ ತಿಳಿಸಿದೆ.