ಕಳಪೆ ರಸ್ತೆ ಕಾಮಗಾರಿಗಾಗಿ ಇಂಜಿನಿಯರ್ ಗಳಿಗೆ ನೋಟಿಸ್ ಜಾರಿ

Prasthutha|

ಬೆಂಗಳೂರು: ಮೋದಿ ಭೇಟಿ ವೇಳೆ ಕೊಮ್ಮಘಟ್ಟ ಮತ್ತು ಮರಿಯಪ್ಪನಪಾಳ್ಯದಲ್ಲಿ ನಿರ್ಮಾಣ ಮಾಡಿದ್ದ ರಸ್ತೆಯ ಡಾಂಬರೀಕರಣ ಕಿತ್ತುಹೋಗಿರುವುದಕ್ಕೆ ಮೂವರು ಇಂಜಿನಿಯರ್ ಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ.

- Advertisement -

ಆರ್ ಆರ್ ನಗರದ ಎಂಜಿನಿಯರ್‌ ಎಂಟಿ ಬಾಲಾಜಿ, ಸಹಾಯಕ ಎಂಜಿನಿಯರ್‌ ಎಚ್ ಜೆ ರವಿ ಮತ್ತು ಸಹಾಯಕ ಎಂಜಿನಿಯರ್‌ ಐಕೆ ವಿಶ್ವಾಸ್‌ ಅವರಿಗೆ ನೋಟಿಸ್‌ ನೀಡಲಾಗಿದೆ.

ಪ್ರಧಾನಿ ಮೋದಿಯವರ ಭೇಟಿಯ ವೇಳೆ ಬಿಬಿಎಂಪಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಆದರೆ, ಮೋದಿ ನವದೆಹಲಿಗೆ ತೆರಳಿದ ನಂತರ ಹಲವು ಪ್ರದೇಶಗಳಲ್ಲಿ ಟಾರ್ ಕಿತ್ತು ಬಂದ ನಂತರ ಬಿಬಿಎಂಪಿಯನ್ನು ಹಲವು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಟೀಕಿಸಿವೆ.

- Advertisement -

ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಬಿಬಿಎಂಪಿ  ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ,ನಿರ್ಲಕ್ಷ್ಯದ ಶಂಕೆ ವ್ಯಕ್ತಪಡಿಸಿದ್ದು, ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.

Join Whatsapp