ನಟ ದರ್ಶನ್‌ಗೆ ಮಹಿಳಾ ಆಯೋಗದಿಂದ ನೋಟಿಸ್

Prasthutha|

ಬೆಂಗಳೂರು: ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಲ್ಪಟ್ಟ ನಟ ದರ್ಶನ್‌ಗೆ ರಾಜ್ಯ ಮಹಿಳಾ ಆಯೋಗ ನೋಟಿಸ್​ ಜಾರಿ ಮಾಡಿದೆ.

- Advertisement -

ಪ್ರಕರಣಕ್ಕೆ‌ ಸಂಬಂಧಿಸಿದಂತೆ ಒಂದು ವಾರದೊಳಗೆ ಉತ್ತರಿಸುವಂತೆ ಆಯೋಗ ಸೂಚಿಸಿದೆ.‌

ಕಾಟೇರ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ಹಾಗೂ ಡಿ ಪರ್ವ 25 ಕಾರ್ಯಕ್ರಮದಲ್ಲಿ  ದರ್ಶನ್ ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎಂದು ಹೇಳಿದ್ದರು.

- Advertisement -

ಇದನ್ನು ಖಂಡಿಸಿ ಗೌಡತಿಯರ ಸಂಘ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು.

ದೂರನ್ನು ಆಧರಿಸಿ ದರ್ಶನ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗವು ಒಂದು ವಾರದೊಳಗೆ ವಿವರಣೆ ನೀಡುವಂತೆ ಜಾರಿ ಮಾಡಲಾಗಿರುವ ನೋಟಿಸ್​ನಲ್ಲಿ ಸೂಚಿಸಲಾಗಿದೆ.

ದರ್ಶನ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೆಣ್ಣು ಮಕ್ಕಳಿಗೆ ದರ್ಶನ್ ಅವಮಾನ ಮಾಡಿದ್ದಾರೆ ಪ್ರತಿಭಟನೆ ನಡೆಸಿದ್ದರು.



Join Whatsapp