ವಾಹನ ಸವಾರರೇ ಗಮನಿಸಿ: HSRP ಇಲ್ಲದಿದ್ದರೆ 5 ದಿನಗಳ ನಂತರ 500 ರೂ. ದಂಡ..!

Prasthutha|

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಮೋಟಾರು ವಾಹನಗಳಿಗೂ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಮಾಡಿಸಿಕೊಳ್ಳಲು ಇನ್ನು 5 ದಿನಗಳು ಮಾತ್ರ ಬಾಕಿಯಿವೆ. ಒಂದು ವೇಳೆ ಹೆಚ್ ಎಸ್ ಆರ್ ಪಿ ನಂಬರ್ ಮಾಡಿಸದಿದ್ದರೆ ಅಂಥವರಿಗೆ ಸೆ.16ರಿಂದ 500 ರೂ. ದಂಡ ವಿಧಿಸಲಾಗುತ್ತದೆ.

- Advertisement -

ಕೇಂದ್ರ ಸಾರಿಗೆ ಇಲಾಖೆಯಿಂದ ದೇಶದಾದ್ಯಂತ ಎಲ್ಲ ಮೋಟಾರು ವಾಹನಗಳಿಗೆ ಒಂದೇ ಮಾದರಿಯ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸಂಬಂಧ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಅಳವಡಿಕೆ ಮಾಡಲು ಆದೇಶ ಹೊರಡಿಸಿದೆ. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿ ನಂತರ ದಂಡ ಪಾವತಿಸಿಕೊಳ್ಳಲು ಅನುಮತಿಯನ್ನೂ ನೀಡಿದೆ.


ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿಕೊಂಡು ಬಂದಿದೆ. ಇದೀಗ ನಾಲ್ಕನೇ ಬಾರಿಯ ಗಡುವು ವಿಸ್ತರಣೆ ಅವಧಿಯು ಸೆ.15ಕ್ಕೆ ಮುಕ್ತಾಯಗೊಳ್ಳಲಿದೆ.

- Advertisement -


ಇನ್ನೂ ಟೈಮ್ ಇದೆ ಅಂತಿದ್ದವರಿಗೆ, ಬರೀ 5 ದಿನ ಟೈಮ್ ಬಾಕಿ ಉಳಿದುಕೊಂಡಿದೆ. ಸೆಪ್ಟೆಂಬರ್ 16 ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಲಿದೆ.



Join Whatsapp