ನೋಟಾ ಆಯ್ಕೆ ರದ್ದುಗೊಳಿಸಬೇಕು: ಛತ್ತೀಸ್‌ಗಢ ಸಿಎಂ ಬಘೇಲ್

Prasthutha|

- Advertisement -

ರಾಯಪುರ: ನಾಗರಿಕರಿಗೆ ವಿದ್ಯುನ್ಮಾನ ಮತಯಂತ್ರಗಳಲ್ಲಿನ ನೋಟಾ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್, ಕೆಲವೊಮ್ಮೆ ಗೆಲುವು ಮತ್ತು ಸೋಲಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ನೋಟಾ ಪಡೆದಿರುವುದು ಕಂಡುಬಂದಿದೆ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ ಎಂದರು.

- Advertisement -

ಈ ಆಯ್ಕೆಯು ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇಬ್ಬರು ಅಭ್ಯರ್ಥಿಗಳ ನಡುವೆ ಗೆಲುವು ಮತ್ತು ಸೋಲಿನ ಅಂತರಕ್ಕಿಂತ ನೋಟದಲ್ಲಿ ಹೆಚ್ಚಿನ ಮತ ನೀಡಿರುವುದು ಹಲವು ಬಾರಿ ಕಂಡುಬಂದಿದೆ. ಆದ್ದರಿಂದ ನೋಟಾ ಆಯ್ಕೆಯನ್ನು ರದ್ದುಗೊಳಿಸಬೇಕು. ಚುನಾವಣಾ ಆಯೋಗ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

Join Whatsapp