ಪಂಜಾಬ್ ನಲ್ಲಿ ಬಿಜೆಪಿಗೆ ನೋಟಾಗಿಂತ ಕಡಿಮೆ ಮತ ; ತುರ್ತು ಸಭೆ ಕರೆದ ಅಮಿತ್ ಶಾ

Prasthutha|

- Advertisement -

ಹೊಸದಿಲ್ಲಿ: ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಯ ಹಿನ್ನೆಲೆಯಲ್ಲಿ ಬಿಜೆಪಿ ಉನ್ನತ ಮಟ್ಟದ ಸಭೆ ಕರೆದಿದೆ. ಸಭೆಯಲ್ಲಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಯುಪಿಯ ಶಾಸಕರು, ಸಂಸದರು ಮತ್ತು ಹಿರಿಯ ಮುಖಂಡರು ಭಾಗವಹಿಸಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗವಹಿಸಿದ್ದರು.

ಜಾಟ್‌ ಸಮುದಾಯದ ನಿರ್ಣಾಯಕವಾದ 40 ಲೋಕಸಭಾ ಕ್ಷೇತ್ರಗಳಲ್ಲಿ ರೈತರ ಹೋರಾಟವು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಪಕ್ಷವು ಅಂದಾಜಿಸಿದೆ. ಸಭೆಯಲ್ಲಿ ಪಂಜಾಬ್‌ನ ಭಾರಿ ಸೋಲಿನ ಬಗ್ಗೆಯೂ ಚರ್ಚೆ ನಡೆದಿದೆ. ವಿಶೇಷವೆಂದರೆ, ಪಂಜಾಬ್‌ನ ಅನೇಕ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಗಿಂತ ಹೆಚ್ಚಿನ ಮತಗಳನ್ನು ನೋಟಾ ಪಡೆದಿದೆ. ಉದಾಹರಣೆಗೆ ಬತಿಂಡದ 10 ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ರಾಜ್ ಕುಮಾರ್ ಅವರು 12 ಮತಗಳನ್ನು ಪಡೆದರೆ ನೋಟಾ 21 ಮತಗಳನ್ನು ಪಡೆದಿದೆ. 20 ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಂಜು ಕೌರ್ 18 ಮತಗಳನ್ನು ಪಡೆದರೆ, ನೋಟಾ 39 ಮತಗಳನ್ನು ಪಡೆದಿದೆ.

- Advertisement -

ಬತಿಂಡಾದ 20 ವಾರ್ಡ್‌ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಪಡೆದಿರುವುದು 100 ಕ್ಕಿಂತ ಕಡಿಮೆ ಮತಗಳು. 24 ನೇ ವಾರ್ಡ್‌ನಲ್ಲಿ ಬಿಜೆಪಿ  ಕೇವಲ 22 ಮತಗಳು ಪಡೆದಿವೆ. ಇಲ್ಲಿ 3,000 ಕ್ಕೂ ಹೆಚ್ಚು ಜನರು  ಮತದಾನ ಮಾಡಿದ್ದಾರೆ. ಬಿಜೆಪಿಗೆ 18 ನೇ ವಾರ್ಡ್‌ನಲ್ಲಿ ಕೇವಲ 61 ಮತಗಳು ಮತ್ತು 21 ನೇ ವಾರ್ಡ್‌ನಲ್ಲಿ 55 ಮತಗಳು ಮಾತ್ರ ದೊರೆತಿವೆ. ಅನೇಕ ಸ್ಥಳಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.



Join Whatsapp