ಮಾತಿಗೆ ಬದ್ಧನಾಗಿಲ್ಲ: ಜನತೆಯ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ

Prasthutha|

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಯಲ್ಲಿ ಕ್ಷಮೆಯಾಚಿಸಿದ ಘಟನೆ ನಡೆದಿದೆ. ಬೆಂಗಳೂರು – ಮೈಸೂರು ಹೆದ್ದಾರಿಯ ಕಾಮಗಾರಿ ಪೂರ್ಣ ಹಂತದಲ್ಲಿದ್ದು, ಆಗಸ್ಟ್ 15 ರಂದು ರಸ್ತೆಗೆ ಅಧಿಕೃತ ಚಾಲನೆ ನೀಡಲಾಗುವುದೆಂದು ತಿಳಿಸಲಾಗಿತ್ತು. ಕಾಮಗಾರಿ ಪೂರ್ತಿಯಾಗದ ಕಾರಣ ಸ್ಥಳೀಯ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಯಲ್ಲಿ ಕ್ಷಮೆಯಾಚಿಸಿದ್ದು, ನನ್ನ ಮಾತಿಗೆ ಬದ್ಧನಾಗಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು – ನಿಡಘಟ್ಟ ರಸ್ತೆಯನ್ನು ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ತಿಳಿಸಿದ್ದರು. ಆ ಬಳಿಕ ಆಗಸ್ಟ್ 15ರ ಒಳಗೆ ಬಿಡದಿ, ರಾಮನಗರ – ಚನ್ನಪಟ್ಟಣ ಬೈಪಾಸ್ ತೆರೆಯುವುದಾಗಿ ಹೇಳಿಕೆ ನೀಡಿದ್ದರು. ಈ ಮಾತಿಗೆ ಬದ್ಧನಾಗಿಲ್ಲ. ಈ ನಿಟ್ಟಿನಲ್ಲಿ ತನ್ನನ್ನು ಕ್ಷಮಿಸುವಂತೆ ಜನತೆಯಲ್ಲಿ ಅಂಗಲಾಚಿದ್ದಾರೆ. ಇನ್ನೂ ಹತ್ತು ದಿನಗಳ ಕಾಮಗಾರಿ ಬಾಕಿಯಿದ್ದು, ಗುಡ್ಡ ತೆರವುಗೊಳಿಸಿ ರಸ್ತೆ ನಿರ್ಮಿಸುವ ಕಾರ್ಯ ಮುಂದುವರಿದಿದೆ. ಆದ್ದರಿಂದ ನನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

Join Whatsapp