ಮೂರಲ್ಲ, 6 ಡಿಸಿಎಂ ಹುದ್ದೆಗಳು ಮಾಡಲಿ: ಬಸವರಾಜ್ ರಾಯರೆಡ್ಡಿ

Prasthutha|

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಜಾತಿ ಧರ್ಮಗಳು ಬೆಂಬಲ ನೀಡಿದ್ದು, ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ಮೂರಲ್ಲ ಬದಲಿಗೆ 6 ಉಪ ಮುಖ್ಯಮಂತ್ರಿಗಳ ಸ್ಥಾನಗಳನ್ನ ಸೃಷ್ಠಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಡಿಸಿಎಂ ಸ್ಥಾನಗಳ ಬಗ್ಗೆ ರಾಜಣ್ಣ, ಜಿ.ಪರಮೇಶ್ವರ್ ಮಾತನಾಡಿದ್ದಾರೆ, ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲ ಇದೆ. ಆದರೆ ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ ಹೀಗಾಗೀ ಮುಸ್ಲಿಂ, ಎಸ್ಸಿ-ಎಸ್ಟಿ, ಲಿಂಗಾಯತ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು ಎಂದು ಹೇಳಿದ್ದಾರೆ.

Join Whatsapp