ಬಾಬರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣವಾದರೂ ಒಬ್ಬನೇ ಒಬ್ಬ ಮುಸ್ಲಿಂ ವಿರೋಧಿಸಲಿಲ್ಲ: ಬಸವರಾಜ ರಾಯರೆಡ್ಡಿ

Prasthutha|

►’ಹಿಂದೂಗಳಿಗೆ ಹೋಲಿಕೆ ಮಾಡಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ’

- Advertisement -

ಕೊಪ್ಪಳ: ಬಾಬರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದರು, ಆದರೆ ಒಬ್ಬನೇ ಒಬ್ಬ ಮುಸ್ಲಿಂ ಸಹ ಅದನ್ನು ವಿರೋಧಿಸಲಿಲ್ಲ ಹಿಂದೂಗಳಿಗೆ ಹೋಲಿಕೆ ಮಾಡಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಕಾಂಗ್ರೆಸ್ ಶಾಸಕ, ವಿಶೇಷ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಸವರಾಜ ರಾಯರೆಡ್ಡಿ, ಮುಸ್ಲಿಮರು ನಮ್ಮ ದೇಶದವರೇ, ಅವರು ಮಂಗಳ ಗ್ರಹದಿಂದ ಬಂದವರಲ್ಲ. ಹಿಂದೂಗಳಿಗೆ ಹೋಲಿಕೆ ಮಾಡಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಬಾಬರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದರೂ ಸಹ ಯಾವುದೇ ಒಬ್ಬ ಮುಸ್ಲಿಮರುದನ್ನು ವಿರೋಧಿಸಲಿಲ್ಲ ಎಂದು ಹೇಳಿದ್ದಾರೆ.

- Advertisement -

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿರುವ ರಾಯರೆಡ್ಡಿ, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಅವರು ಬಡವರ ಪರ ಕಾಳಜಿ ಹೊಂದಿದ್ದಾರೆ. ಅವರು 5 ವರ್ಷ ಸಿಎಂ ಆಗಿರಬೇಕು ಅವಧಿ ಪೂರ್ಣಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಯಿದೆ. ಈ ಬಜೆಟ್ ನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.



Join Whatsapp