ಕೋಪನ್ ಹ್ಯಾಗನ್: 2011ರಲ್ಲಿ 77 ಜನರನ್ನು ಕೊಂದ ಬಲಪಂಥೀಯ ಉಗ್ರಗಾಮಿ ಆಂಡರ್ಸ್ ಬೆಹ್ರಿಂಗ್ ಬ್ರೀವಿಕ್ ನ ಪೆರೋಲ್ ಮನವಿಯನ್ನು ನಾರ್ವೇಜಿಯನ್ ನ್ಯಾಯಾಲಯವು ತಿರಸ್ಕರಿಸಿದೆ.
ತೀರ್ಪಿನಲ್ಲಿ ಬ್ರೀವಿಕ್ ಹತ್ಯಾಕಾಂಡಕ್ಕೆ ಕಾರಣವಾದ ನಡವಳಿಕೆಗೆ ಮರಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಓಸ್ಲೋ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ಎಡಪಂಥೀಯ ಯುವ ಕಾರ್ಯಕರ್ತರಿಗಾಗಿ ಬೇಸಿಗೆ ಶಿಬಿರದಲ್ಲಿ ಗುಂಡಿನ ದಾಳಿ ನಡೆಸಿದ ಕಾರಣಕ್ಕಾಗಿ ಬ್ರೀವಿಕ್ ಗರಿಷ್ಠ 21 ವರ್ಷಗಳ ಶಿಕ್ಷೆಯನ್ನು ನ್ಯಾಯಲಯವು ವಿಧಿಸಿತ್ತು.
ಕಳೆದ ತಿಂಗಳು, ಬ್ರೀವಿಕ್ ಪೆರೋಲ್ ವಿಚಾರಣೆಯನ್ನು ಮೂರು ನ್ಯಾಯಾಧೀಶರ ಟೆಲಿಮಾರ್ಕ್ ಜಿಲ್ಲಾ ನ್ಯಾಯಾಲಯದ ಮುಂದಿಟ್ಟಿದ್ದರು.
“ಅವನ ಮನೋಸ್ಥಿತಿ ಬದಲಾಗದೆ ಇರುವುದರಿಂದ, ಜುಲೈ 22, 2011 ರಂದು ನಡೆದ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾದ ನಡವಳಿಕೆಯಿಂದ ಅವನು ಹಿಂದೆ ಸರಿಯದಿರುವ ಅಪಾಯವಿದೆ” ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.