ಪ್ಯೊಂಗ್ಯಾಂಗ್: ಅಮೆರಿಕ ದಾಳಿ ನಡೆಸಿದರೆ ತಮ್ಮ ದೇಶವು ಯಾವುದೇ ಹಿಂಜರಿಕೆಯಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಿದೆ ಎಂದು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದಾರೆ.
ಶತ್ರು ಪಡೆಗಳು ಉತ್ತರ ಕೊರಿಯಾದ ಸಾರ್ವಭೌಮತ್ವದ ಮೇಲೆ ಅತಿಕ್ರಮಣ ಮಾಡುತ್ತಿದ್ದರೆ, ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ನಮ್ಮಲ್ಲಿರುವ ಎಲ್ಲಾ ಆಕ್ರಮಣಕಾರೀ ಶಕ್ತಿಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಳಸುತ್ತೇವೆ ಎಂದು ಕಿಮ್ ಜಾಂಗ್ ಹೇಳಿದ್ದಾರೆ.
ವಿಶೇಷ ಕಾರ್ಯ ಪಡೆಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಉತ್ತರ ಕೊರಿಯಾದ ಆಡಳಿತ ಅಂತ್ಯಗೊಳಿಸುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ನೀಡಿದ ಹೇಳಿಕೆಯನ್ನು ಖಂಡಿಸಿದರು.