ಅಧಿಕೃತವಲ್ಲದ ನ್ಯಾಯಾಲಯಗಳನ್ನು ಮಾಧ್ಯಮಗಳು ನಡೆಸುತ್ತಿವೆ: ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಕಳವಳ

Prasthutha|

ರಾಂಚಿ(ಜಾರ್ಖಂಡ್): ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆಗಳಲ್ಲಿ  ಅಜೆಂಡಾ ಚಾಲಿತ ಕಾಂಗರೂ ನ್ಯಾಯಾಲಯಗಳು (ಅಧಿಕೃತವಲ್ಲದ ನ್ಯಾಯಾಲಯಗಳು) ನ್ಯಾಯದಾನಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ.

- Advertisement -

ಇತ್ತೀಚೆಗೆ, ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿರುವುದನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೂ ನಿರ್ಧರಿಸಲು ಕಷ್ಟವಾಗುವ ವಿಷಯಗಳ ಬಗ್ಗೆ ತಪ್ಪು ತಿಳುವಳಿಕೆ ಮತ್ತು ಕಾರ್ಯಸೂಚಿ ಆಧಾರಿತ ಚರ್ಚೆಗಳು ಮಾಧ್ಯಮಗಳು ನಡೆಸುತ್ತಿರುವುದು  ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕವಾಗಿದೆ  ಎಂದು ರಾಂಚಿಯಲ್ಲಿ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಸ್ಮಾರಕ ಉದ್ಘಾಟನಾ ಉಪನ್ಯಾಸ ನೀಡುವಾಗ ಸಿಜೆಐ ಹೇಳಿದರು.

ನಮ್ಮ ಮಾಧ್ಯಮಗಳು ಯಾವುದನ್ನಾದರೂ ವಿಶಿಷ್ಟ ರೀತಿಯಲ್ಲಿ ವೈಭವೀಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಸರಿ ಮತ್ತು ತಪ್ಪು, ಒಳ್ಳೆಯದು ಮತ್ತು ಕೆಟ್ಟದ್ದು ಮತ್ತು ಸತ್ಯ ಮತ್ತು ನಕಲಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

- Advertisement -

ನ್ಯಾಯದಾನ ವಿಚಾರದ ಸರಿಯಾದ ಮಾಹಿತಿಯಿಲ್ಲದೆ ನಿರ್ಧಿಷ್ಟ ಅಜೆಂಡಾ ಆಧಾರಿತ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕವಾಗಿವೆ. ಮಾಧ್ಯಮದವರು ಜವಾಬ್ದಾರಿಯ ಪರಿಧಿಯನ್ನು ದಾಟಿ ಪ್ರಜಾಪ್ರಭುತ್ವವನ್ನು ಎರಡು ಹಜ್ಜೆ ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಜಸ್ಟಿಸ್ ರಮಣ ಹೇಳಿದರು.

Join Whatsapp