ಅದನ್ನು ಓದುವಂತೆ ಯಾರೂ ಒತ್ತಡ ಹೇರಿಲ್ಲ ಎಂದು ಉಲ್ಲೇಖಿಸಿದ ನ್ಯಾಯಮೂರ್ತಿ
ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ರ ನೂತನ ಪುಸ್ತಕದ ಪ್ರಕಟಣೆ, ಮಾರಾಟವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಮಾತ್ರವಲ್ಲ ಜನರು ಪುಸ್ತಕವನ್ನು ಖರೀದಿಸುವ ಅಥವಾ ಓದುವ ಅನಿವಾರ್ಯತೆ ಇಲ್ಲ ಎಂದು ಅದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ, ಪುಸ್ತಕಕ್ಕೆ ನ್ಯಾಯಾಲಯ ನಿಷೇಧ ಹೇರುವುದು ಸೂಕ್ತವಲ್ಲ. ಈ ಬಗ್ಗೆ ಪುಸ್ತಕವನ್ನು ಖರೀದಿಸದಂತೆ ಅಥವಾ ಓದದಂತೆ ಜನರನ್ನು ಮನವೊಲಿಸುವಂತೆ ತಿಳಿಸಿದರು. ಆದರೆ ಒತ್ತಡ ಹೇರುವಂತಿಲ್ಲ ಎಂದು ಉಲ್ಲೇಖಿಸಿದರು.
ಇತ್ತೀಚೆಗೆ ಸಲ್ಮಾನ್ ಖುರ್ಷಿದ್ ಅವರು “ಸನ್ ರೈಸ್ ಓವರ್ ಆಯೋಧ್ಯೆ” ಎಂಬ ಪುಸ್ತಕ ಬಿಡುಗಡೆಗೆ ಮುಂಚೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಬಿಜೆಪಿ ಮತ್ತು ಸಂಘಪರಿವಾರ ಪ್ರತಿಭಟನೆ ನಡೆಸಿದ್ದವು. ಮಾತ್ರವಲ್ಲ ಖುರ್ಷಿದ್ ಅವರ ನಿವಾಸಕ್ಕೆ ದುಷ್ಕರ್ಮಿಗಳ ತಂಡವೊಂದು ದಾಳಿ ಬೆಂಕಿ ಹಚ್ಚಿ ದಾಂದಲೆ ನಡೆಸಿದ್ದವು.
ಖುರ್ಷಿದ್ ಅವರು ಬರೆದ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್ ಮತ್ತು ಬೋಕೋ ಹರಾಮ್ ನಂತಹ ಗುಂಪುಗಳಿಗೆ ಹೋಲಿಸಿದ್ದಾರೆ ಎಂಬ ಆರೋಪದಲ್ಲಿ ವಕೀಲ ವಿನೀತ್ ಜಿಂದಾಲ್ ಅವರು ವಕೀಲ ರಾಜ್ ಕಿಶೋರ್ ಚೌಧರಿ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಹೂಡಿದ್ದರು.