ಮೂವರು ವಿಜ್ಞಾನಿಗಳಿಗೆ ಭೌತ ವಿಜ್ಞಾನದ ನೋಬೆಲ್ ಪ್ರಶಸ್ತಿ

Prasthutha|

ವಾಷಿಂಗ್ಟನ್: ಸುಕುರೊ ಮನಬೆ, ಕ್ಲಾಸ್ ಹ್ಯಾಸೆಲ್ ಮನ್, ಜಾರ್ಜಿಯೋ ಪಾರಿಸಿ ಎಂಬ ಮೂವರು ವಿಜ್ಞಾನಿಗಳಿಗೆ 2021ನೇ ಸಾಲಿನ ಭೌತ ವಿಜ್ಞಾನದ ನೋಬೆಲ್ ಪ್ರಶಸ್ತಿ ಪ್ರಕಟಿಸಲಾಯಿತು.


ಜಪಾನ್ ಮೂಲದ ಸುಕುರೊ ಮನಬೆ ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು. ಜರ್ಮನಿಯ ಕ್ಲಾಸ್ ಹ್ಯಾಸೆಲ್ ಮನ್ ಹ್ಯಾಂಬರ್ಗ್‌ನಲ್ಲಿ ಪ್ರಾಧ್ಯಾಪಕರಾಗಿರುವರು. ಇಟೆಲಿಯ ಜಾರ್ಜಿಯೋ ಪಾರಿನಿ ಸೇವಿಯರ್‌ನಲ್ಲಿ ಪ್ರಾಧ್ಯಾಪಕರು. ವಿಶ್ವದ ಭೌತಿಕ ರಚನೆಯ ಸಂಕೀರ್ಣತೆಯನ್ನು ಅಧ್ಯಯನ ಮಾಡಿದ್ದಕ್ಕಾಗಿ ನೋಬೆಲ್ ನೀಡಲಾಗಿದೆ.

Join Whatsapp