ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಈಶ್ವರ ಖಂಡ್ರೆ

Prasthutha|

ದಾವಣಗೆರೆ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹಾಗಾಗಿ ಲಿಂಗಾಯತ ಮುಖ್ಯಮಂತ್ರಿ ಎಂಬ ವಿಷಯ ಕುರಿತು ಚರ್ಚಿಸುವುದು ಎಲ್ಲಿಂದ ಬರುತ್ತದೆ ಎಂದು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹಾಗಾಗಿ ಲಿಂಗಾಯತ ಮುಖ್ಯಮಂತ್ರಿ ಎಂಬ ಚರ್ಚೆ ಎಲ್ಲಿಂದ ಬರುತ್ತದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಬಸವಣ್ಣನವರ ಮಾತಿನ ಪ್ರೇರಣೆಯಂತೆ ಕಾಂಗ್ರೆಸ್ ಸರ್ಕಾರ ಎಲ್ಲ ಜಾತಿ, ಮತ, ಪಂಥ, ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುತ್ತಿದೆ ಎಂದರು.

Join Whatsapp