ಜೆಡಿಎಸ್‌ ಚಿಹ್ನೆ, ಲೆಟರ್‌ಹೆಡ್‌ ಬಳಸುವಂತಿಲ್ಲ: ಇಬ್ರಾಹಿಂಗೆ ಕೋರ್ಟ್‌ ಆದೇಶ

Prasthutha|

ಬೆಂಗಳೂರು: ತಾನು ಈಗಲೂ ಜೆಡಿಎಸ್ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದು, ತನ್ನ ಅಮಾನತು ಮಾಡಿರುವುದರ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದ ಸಿಎಂ ಇಬ್ರಾಹಿಂಗೆ ಭಾರೀ ಹಿನ್ನೆಡೆಯಾಗಿದೆ. ಜೆಡಿಎಸ್‌ ಪಾರ್ಟಿ ಚಿಹ್ನೆ, ಲೆಟರ್‌ಹೆಡ್‌ ಬಳಸದಂತೆ ಅವರಿಗೆ ಕೋರ್ಟ್‌ ಆದೇಶ ನೀಡಿದೆ.

- Advertisement -

ಸಿಟಿ ಸಿವಿಲ್‌ ಕೋರ್ಟ್‌ ಈ ಆದೇಶವನ್ನು ಹೊರಡಿಸಿದೆ. ತಮ್ಮನ್ನು ಪಕ್ಷದಿಂದ ಅಮಾನತುಗೊಳಿಸಿರುವುದನ್ನು ತಡೆಯುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ಮತ್ತು ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಇಬ್ರಾಹಿಂ ಕೆಲ ದಿನಗಳ ಹಿಂದೆ ಹೇಳಿದ್ದರು. ತಾವೇ ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ ಎಂದು ಹೇಳಿದ್ದರು.



Join Whatsapp