ನೀಟ್ ಮರು ಪರೀಕ್ಷೆ ಇಲ್ಲ: ಸುಪ್ರೀಂ ಕೋರ್ಟ್ ಆದೇಶ

Prasthutha|

ನವದೆಹಲಿ: 2024ರ ನೀಟ್- ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮರು ಪರೀಕ್ಷೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಹೇಳಿದೆ.

- Advertisement -


ಎರಡು ಸ್ಥಳೀಯ ಪ್ರಶ್ನೆ ಪತ್ರಿಕೆಗಳ ಸೋರಿಕೆಗಳ ನಂತರ ಪರೀಕ್ಷೆಯ “ವ್ಯವಸ್ಥಿತ ಉಲ್ಲಂಘನೆ” ಅಥವಾ “ಪಾವಿತ್ರ್ಯತೆ” ಅನ್ನು ಸೂಚಿಸುವ ಯಾವುದೇ ಡೇಟಾ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಮರು-ಪರೀಕ್ಷೆಯನ್ನು ನಡೆಸುವ ಆದೇಶವು 23.33 ಲಕ್ಷ ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.



Join Whatsapp