ನವದೆಹಲಿ: ಸಂಸತ್ತಿನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಮಂದಿ ಇದ್ದ ಸಾಂವಿಧಾನಿಕ ಪೀಠವು, 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಪಂಚ ಸದಸ್ಯ ಪೀಠ ನೀಡಿದ್ದ ತೀರ್ಪನ್ನು ಸರ್ವಾನುಮತದಿಂದ ರದ್ದು ಮಾಡಿತು.
ಸದನದಲ್ಲಿ ಮತ ಅಥವಾ ಭಾಷಣಕ್ಕೆ ಲಂಚ ಪಡೆದ ಆರೋಪದ ಮೇಲೆ ಸಂಸದರು/ಶಾಸಕರನ್ನು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಶಾಸಕಾಂಗದ ಸದಸ್ಯರಿಂದ ಭ್ರಷ್ಟಾಚಾರ ನಡೆದರೆ ಅದು ಸಾರ್ವಜನಿಕರ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೂ ಅದು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಏಳು ಪೀಠಗಳು ಹೇಳಿದೆ. ಸಂಸತ್ ಅಥವಾ ಶಾಸಕಾಂಗದ ಕಾರ್ಯಚಟುವಟಿಕೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡಿದರೆ, ಅದು ಕಾನೂನಿನ ಚೌಕಟ್ಟಿನ ಒಳಗೆ ಬರದೆವಿರುವ ವಿನಾಯಿತಿಗಳನ್ನು ಅನುಭವಿಸುವ ವರ್ಗವನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದು ಹೇಳಿದೆ.