ಪ್ರಹ್ಲಾದ ಜೋಷಿ ಬೇಡ: ಅಭ್ಯರ್ಥಿ ಬದಲಾವಣೆಗೆ ಗಡುವು ನೀಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ

Prasthutha|

ಹುಬ್ಬಳ್ಳಿ: ಸಚಿವ ಪ್ರಲ್ಹಾದ ಜೋಶಿಗೆ ಟಿಕೆಟ್ ನೀಡಬಾರದು. ಅವರ ಬದಲು ಬೇರೊಬ್ಬರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಬೇಕು ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

- Advertisement -

ಇಲ್ಲಿನ ಮೂರು ಸಾವಿರ ಮಠದಲ್ಲಿ ವಿವಿಧ ಮಠಾಧೀಶರ ಚಿಂತನ-ಮಂಥನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ ಲಿಂಗಾಯತ ಮತ್ತು ಇತರ ಸಮಾಜದ ನಾಯಕರನ್ನು ತುಳಿದು, ಅವಮಾನಿಸಿದವರು ಪ್ರಹ್ಲಾದ ಜೋಷಿ. ಅವರಿಗೆ ಟಿಕೆಟ್ ನೀಡಬಾರದು ಎಂದಿದ್ದಾರೆ.

ಬಿಜೆಪಿ ವರಿಷ್ಠರು ಮಾರ್ಚ್‌ 31ರೊಳಗೆ ಅಭ್ಯರ್ಥಿಯನ್ನು ಬದಲಿಸಬೇಕು. ಇಲ್ಲದಿದ್ದರೆ, ಏಪ್ರಿಲ್ 2ರಂದು ಮತ್ತೆ ಮಠಾಧೀಶರ ಸಭೆ ನಡೆಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

- Advertisement -

ಜೋಶಿ ಅವರ ನಡೆಯಿಂದ ವೀರಶೈವ ಲಿಂಗಾಯತರು, ದಲಿತರು, ಕುರುಬರು ಸೇರಿ ಎಲ್ಲ ಸಮಾಜದವರು ನೊಂದಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಸತ್ತೆಯನ್ನು ತಂದ ಅವರನ್ನು ಬದಲಿಸಬೇಕುಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದವರು ಯಾರು ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಅವರನ್ನು ಕೆಳಗಿಳಿಸಿ, ಆ ಜಾಗದಲ್ಲಿ ಕೂರಲು ಜಾಕೆಟ್ ಹೊಲಿಸಿಕೊಂಡು ಪ್ರಲ್ಹಾದ ಜೋಶಿ ಸಿದ್ಧರಾಗಿದ್ದರು. ನಮ್ಮ ಹೋರಾಟದಿಂದ ಅವರ ಜಾಕೆಟ್ ಮೂಲೆ ಸೇರಿತು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.



Join Whatsapp