ಕೊರೋನ 2ನೇ ಅಲೆ ವೇಳೆ ಆಮ್ಲಜನಕ ಕೊರತೆಯಿಂದ ಯಾವುದೇ ಸಾವಾಗಿಲ್ಲವೆಂದ ಯುಪಿ ಸರ್ಕಾರ

Prasthutha|

ಲಕ್ನೋ : ಕೊರೊನಾ ಎರಡನೇ ಅಲೆಯ ಸಮಯದಲ್ಲಿ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳಾಗಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದೆ. ಆದರೆ ಸರ್ಕಾರದ ಈ ಪ್ರತಿಪಾದನೆಯನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ.

- Advertisement -

ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ 22,915 ರೋಗಿಗಳಲ್ಲಿ ಯಾರೊಬ್ಬರಲ್ಲೂ ‘ಆಮ್ಲಜನಕದ ಕೊರತೆಯಿಂದಾದ ಸಾವು’ ಎಂದು ಮರಣ ಪ್ರಮಾಣಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಸರ್ಕಾರ ಹೇಳಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ದೀಪಕ್ ಸಿಂಗ್ ಅವರಿಗೆ ಉತ್ತರಿಸಿದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ‘ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಹೇಳಿದ್ದಾರೆ. “ಆಸ್ಪತ್ರೆಗೆ ದಾಖಲಾದ ರೋಗಿಯು ಮೃತಪಟ್ಟರೆ ವೈದ್ಯರು ಮರಣ ಪ್ರಮಾಣ ಪತ್ರ ನೀಡುತ್ತಾರೆ. ರಾಜ್ಯದಲ್ಲಿ ಕೊರೊನಾ ಸಂತ್ರಸ್ತರಿಗಾಗಿ ವೈದ್ಯರು ನೀಡಿರುವ 22,915 ಮರಣ ಪ್ರಮಾಣ ಪತ್ರಗಳಲ್ಲಿ ಎಲ್ಲಿಯೂ ‘ಆಮ್ಲಜನಕದ ಕೊರತೆಯಿಂದ ಆದ ಸಾವು’ ಎಂಬ ಉಲ್ಲೇಖವಿಲ್ಲ” ಎಂದು ಅವರು ಹೇಳಿದ್ದಾರೆ.



Join Whatsapp