ಸಚಿವ ಸುಧಾಕರ್ 15,000 ಕೋಟಿ ಲೂಟಿ ಮಾಡಿದ ಬಗ್ಗೆ ಯಾರೂ ಮಾತನಾಡಿಲ್ಲ: ಎಚ್ ವಿಶ್ವನಾಥ್

Prasthutha|

ಬೆಂಗಳೂರು: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ 15,000 ಕೋಟಿ ಲೂಟಿ ಹೊಡೆದ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -


ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಲಂಚ ಪ್ರಕರಣದಲ್ಲಿ ಸರ್ಕಾರ ಹೈಡ್ರಾಮಾ ಮಾಡುತ್ತಿದೆ. ವಿರೂಪಾಕ್ಷಪ್ಪ ಮೊದಲ ಆರೋಪಿ ಎನ್ನುವುದು ಬಯಲಾಗುತ್ತಿದ್ದಂತೆ ಅವರು ಕಣ್ಮರೆಯಾಗಿದ್ದರು. ಮಾಡಾಳ್’ನಲ್ಲಿರುವುದು ಪೊಲೀಸರಿಗೆ ಗೊತ್ತಿದ್ದರೂ ಬಂಧಿಸದೇ ಬೆಂಗಳೂರಿನಲ್ಲಿ ಅವರನ್ನು ಹುಡುಕುತ್ತಿದ್ದರು. ಇದೆಲ್ಲ ಸರ್ಕಾರದ ಹೈಡ್ರಾಮಾ ಎಂದರು.


ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಇಲ್ಲಿ ಯಾವುದೇ ಸರ್ಕಾರದ ವಕೀಲರ ನೇಮಕವಾಗಿಲ್ಲ. ಈ ಪ್ರಕರಣದ ತನಿಖಾ ತಂಡದಲ್ಲಿದ್ದ ಲೋಕಾಯುಕ್ತದ ಇಬ್ಬರು ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು

Join Whatsapp