ಗೃಹಲಕ್ಷ್ಮಿ ಅರ್ಜಿಗೆ ಯಾರೂ ಹಣ ಕೊಡಬೇಡಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

Prasthutha|

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೂ ದುಡ್ಡು ಕೊಡಬಾರದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

- Advertisement -


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರೂ. ಕೂಡ ಖರ್ಚಿಲ್ಲದೆ ಮಹಿಳೆಯರಿಗೆ ಹಣ ನೀಡಬೇಕೆನ್ನುವುದು ಸರ್ಕಾರದ ಉದ್ದೇಶ. ಹಾಗಾಗಿ ಸೇವೆ ನೀಡುವ ಕೇಂದ್ರ ಮತ್ತು ವ್ಯಕ್ತಿಗಳಿಗೆ ಸರಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ 20 ರೂ. ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ಬಂದು ಹಣ ಕೊಡಿ ಎಂದು ಕೇಳಿದರೆ ಕೊಡಬೇಡಿ ಎಂದು ವಿನಂತಿಸಿದರು.


ಕೆಲವು ಕಡೆ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೇನೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಮಹಿಳೆಯರ ಖಾತೆಗೆ ಹಣ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕೆ ಯಾರೂ ಅವಕಾಶ ಕೊಡಬಾರದು. ಅರ್ಜಿ ಸಲ್ಲಿಸಲು ಯಾವುದೇ ಸಮಯ ಮಿತಿ ಇಲ್ಲದಿರುವುದರಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗುವುದು. ಹಾಗಾಗಿ ಯಾರೂ ಹಣ ಕಳೆದುಕೊಳ್ಳಬಾರದು ಎಂದು ಹೇಳಿದರು.



Join Whatsapp