ಶ್ರೀಲಂಕಾವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸೆಂಟ್ರಲ್ ಬ್ಯಾಂಕ್ ಗವರ್ನರ್

Prasthutha|

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಆಘಾತಕಾರಿ ಹೇಳಿಕೆ ನೀಡಿರುವ ಸೆಂಟ್ರಲ್ ಬ್ಯಾಂಕ್ ಗವರ್ನರ್ ಪಿ. ನಂದಲಾಲ್ ವೀರಸಿಂಘೆ ಶ್ರೀಲಂಕಾವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, ದೇಶದಲ್ಲಿ ಇನ್ನೆರಡು ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ ಶ್ರೀಲಂಕಾದ ಆರ್ಥಿಕತೆಯು ನಿರೀಕ್ಷೆ ಮೀರಿ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.

- Advertisement -

ಜನರು ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದು, ಬ್ಯಾಂಕಿನ ಚೇತರಿಕೆಯ ಯೋಜನೆಯನ್ನು ಸ್ಥಗಿತಗೊಳಿಸಿದೆ. ಮತ್ತು ಪ್ರಧಾನಿ ರಾಜಪಕ್ಸ ರಾಜೀನಾಮೆಯಿಂದ ಲಂಕಾದ್ಲಿ ರಾಜಕೀಯ ಅಸ್ಥಿರತೆಯೂ ಉಂಟಾಗಿದೆ. ರಾಜಕೀಯ ಪರಿಸ್ಥಿತಿ ಸುಧಾರಿಸದೇ ಇದ್ದರೆ ಸದ್ಯದ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಸೆಂಟ್ರಲ್ ಬ್ಯಾಂಕ್ ಕೈಗೊಳ್ಳುವ ನಿರ್ಧಾರಗಳು ಫಲ ಕೊಡುವುದಿಲ್ಲ, ಆದ್ದರಿಂದ “ಒಂದು ಅಥವಾ ಎರಡು ವಾರಗಳಲ್ಲಿ ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯಲಿದೆ ಎಂದು ವೀರಸಿಂಘೆ ಹೇಳಿದ್ದಾರೆ.

ನಾನಿಲ್ಲಿ ಸೆಂಟ್ರಲ್ ಬ್ಯಾಂಕ್ ಗವರ್ನರ್ ಆಗಿದ್ದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ, ಈ ಹಂತದಲ್ಲಿ ಶ್ರೀಲಂಕಾವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, ಸರ್ಕಾರ ರಚನೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಾನೂ ರಾಜೀನಾಮೆ ನೀಡುತ್ತೇನೆ ಎಂದು ಗವರ್ನರ್ ಪಿ. ನಂದಲಾಲ್ ವೀರಸಿಂಘೆ ಹೇಳಿದ್ದಾರೆ.



Join Whatsapp