ಬೆಂಗಳೂರು: ಕಿಡಿಗೇಡಿಗಳ ವದಂತಿಯ ಮಧ್ಯೆ ಮಂಗಳವಾರ ನಡೆಯುವ ಈದ್ ಉಲ್ ಪಿತ್ರ್ ಆಚರಣೆಯ ವೇಳೆ ಮಾಂಸ ಮಾರಾಟಕ್ಕೆ ನಿಷೇಷ ಹೇರುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಬಸವ ಜಯಂತಿ ಮತ್ತು ಈದ್ ಉಲ್ ಫಿತ್ರ್ ಹಬ್ಬದ ವೇಳೆ ಮಂಗಳವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ ಎಂಬ ವದಂತಿ ಹಬ್ಬಿಸಲಾಗಿದ್ದು, ಇದನ್ನು ಪಾಲಿಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಪಶುಸಂಗೋಪನಾ ವಿಭಾಗದ ಅಧಿಕಾರಿಯೊಬ್ಬರು ಈ ವದಂತಿಗೆ ತೆರೆ ಎಳೆದಿದ್ದು, ನಗರಾಭಿವೃದ್ಧಿ ಇಲಾಖೆಯು ಮಾಂಸ ನಿಷೇಧಕ್ಕೆ ಈ ವರ್ಷ ಗೊತ್ತುಪಡಿಸಿದ ಒಂಬತ್ತು ದಿನಗಳಲ್ಲಿ ಬಸವ ಜಯಂತಿ ಒಳಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಇಲಾಖೆ ಗೊತ್ತುಪಡಿಸಿದಒಂಬತ್ತು ದಿನಗಳೆಂದರೆ,ಹುತಾತ್ಮರ ದಿನ (ಜನವರಿ 30), ಮಹಾಶಿವರಾತ್ರಿ (ಮಾರ್ಚ್ 1), ಶ್ರೀ ರಾಮ ನವಮಿ (ಏಪ್ರಿಲ್ 10), ಮಹಾವೀರ ಜಯಂತಿ (ಏಪ್ರಿಲ್ 14), ಬುದ್ಧ ಪೂರ್ಣಿಮಾ (ಮೇ 16), ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 19), ಗಣೇಶ ಚತುರ್ಥಿ (ಆಗಸ್ಟ್ 31), ಗಾಂಧಿ ಜಯಂತಿ (ಅಕ್ಟೋಬರ್ 2), ಮತ್ತು ಸಾಧು ವಾಸ್ವಾನಿ ಜಯಂತಿ (ನವೆಂಬರ್ 25) ಎಂದು ತಿಳಿದು ಬಂದಿವೆ.